ಬಿಜೆಪಿಯಿಂದ ಮತಯಾಚನೆ

7

ಬಿಜೆಪಿಯಿಂದ ಮತಯಾಚನೆ

Published:
Updated:

ಹೆಣ್ಣೂರು ಬಾಣಸವಾಡಿ: ಯುಪಿಎ ಸರ್ಕಾರ ಹಗರಣಗಳಲ್ಲಿ ಸಿಲುಕುವ ಮೂಲಕ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಹೇಳಿದರು.ಹೆಣ್ಣೂರು, ಕಮ್ಮನಹಳ್ಳಿ, ಬಾಣಸ­ವಾಡಿ, ಕಾಚರಕನಹಳ್ಳಿ ಭಾಗಗಳಲ್ಲಿ ಮನೆ ಮನೆಗೆ ಮತಯಾ­ಚನೆ ಮಾಡಿ ಅವರು ಮಾತನಾಡಿದರು.

ಗಡಿಗಳಲ್ಲಿ ವಿರೋಧಿಗಳ ಉಪಟಳ ಹೆಚ್ಚಾದರೂ  ಯುಪಿಎ ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದು­ಕೊಳ್ಳು­ವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಇದೆಲ್ಲದರ ಪರಿ­ಣಾಮ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕ­ಸಭಾ ಚುನಾವಣೆ­ಯಲ್ಲಿ ಪರಾ­ಭವ ಅನುಭವಿಸಲಿದೆ ಎಂದು ಹೇಳಿದರು.ಬಿಬಿಎಂಪಿ ಸದಸ್ಯರಾದ ಗೋವಿಂದರಾಜು, ಎಂ.ಸಿ. ಶ್ರೀನಿವಾಸ್, ಮುಖಂಡ ಎಂ .ಎನ್.ರೆಡ್ಡಿ, ಹೆಣ್ಣೂರು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭಕ್ತವತ್ಸಲಂ, ಕಾರ್ಯದರ್ಶಿ ಮುನಿರಾಜು ಸೇರಿದಂತೆ ನೂರಾರು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry