ಬಿಜೆಪಿಯಿಂದ ಸಂತ್ರಸ್ತರಿಗೆ ಶಾಶ್ವತ ಪರಿಹಾರ

ಮಂಗಳವಾರ, ಜೂಲೈ 16, 2019
25 °C

ಬಿಜೆಪಿಯಿಂದ ಸಂತ್ರಸ್ತರಿಗೆ ಶಾಶ್ವತ ಪರಿಹಾರ

Published:
Updated:

ಬಸವನಬಾಗೇವಾಡಿ: ಭೀಕರ ಮಳೆ ಬಂದಾಗ ಕೆಲ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರೂ  ಈ ಹಿಂದಿನ ಸರ್ಕಾರಗಳು ಅಲ್ಪ ಪ್ರಮಾಣದ ಪರಿಹಾರ ನೀಡಿವೆ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಚನೆ ಮಾಡಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಳೆಯಿಂದ ಶಾಶ್ವತ ತೊಂದರೆ ಅನುಭವಿಸುತ್ತಿರುವ ಗ್ರಾಮಗಳ ಸ್ಥಳಾಂತರ ಮಾಡಲು ಮುಂದಾಗಿದೆ ಎಂದು ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ತಾಲ್ಲೂಕಿನ ಡೋಣೂರ ಗ್ರಾಮದ ಸಮೀಪದ ನೂತನ ಆಸರೆ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  623 ಆಸರೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡೋಣಿ ನದಿಯಿಂದ ತೊಂದರೆ ಅನುಭವಿಸುತ್ತಿರುವ ಡೋಣೂರ ಗ್ರಾಮವನ್ನು ಸ್ಥಳಾಂತರಿಸುವುದಕ್ಕಾಗಿ 58 ಎಕರೆ ಜಮೀನಿನಲ್ಲಿ ಅಂದಾಜು 11 ಕೋಟಿ ವೆಚ್ಚದಲ್ಲಿ 623 ಮನೆಗಳನ್ನು ನಿರ್ಮಿಸಲಾಗಿದೆ.  ಸುಸಜ್ಜಿತ ರಸ್ತೆ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟು ಸಂಖ್ಯೆಯ ಮನೆಗಳ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು ಪ್ರತಿಯೊಬ್ಬರು ನೂತನ ಮನೆಗಳಲ್ಲಿ ನೆಲಸಬೇಕು ಎಂದು ತಿಳಿಸಿದರು.

ಈ ನೂತನ ಗ್ರಾಮಕ್ಕೆ ಅವಶ್ಯವಿರುವ ಶಾಲಾ ಕಟ್ಟಡ, ಗ್ರಾ.ಪಂ ಕಟ್ಟಡ ಮತ್ತು ದೇವಾಲಯಗಳನ್ನು ಹಂತ ಹಂತವಾಗಿ  ನಿರ್ಮಾಣ  ಮಾಡಲಾಗುವುದು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಮಳೆಗಾಲ ಬಂತೆಂದರೆ ಭಯದ ವಾತಾವರಣದಲ್ಲಿ ಇದ್ದ ಡೋಣೂರು ಗ್ರಾಮಸ್ಥರಿಗೆ ಉತ್ತಮ ಮನೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಒಳ್ಳೆಯ ಕೆಲಸ ಮಾಡಲಾಗಿದೆ. ಈ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ಕಾಳಜಿ ವಹಿಸುವ ಶಾಸಕರು. ಗುತ್ತಿಗೆದಾರರು ಮತ್ತು ಎಂಇನಿಯರ್‌ರನ್ನು ನಾವು ಸ್ಮರಿಸಬೇಕು. ಗ್ರಾಮದ ಜನರು ಸರ್ಕಾರ ಒದಗಿಸುವ ಇಂತಹ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಪಿಎಂಎಸ್‌ವೈನ ಯೋಜನಾ ಅಧಿಕಾರಿ ಆರ್.ಡಿ. ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು.ಚಿಮ್ಮಲಗಿಯ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಜಿ.ಪಂ ಸದಸ್ಯೆ ಶಾಂತಮ್ಮ ಗೌಡತಿ ನಾಡಗೌಡ, ತಾ.ಪಂ ಸದಸ್ಯರಾದ ಚನ್ನಗೌಡ ಬಿರಾದಾರ, ರವಿ ಡೋಮನಾಳ, ಮಲ್ಲೇಶಿ ಇಂಡಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಗನಗೌಡ ರಾಯಗೊಂಡ, ಚಂದ್ರಶೇಖರ ಲಿಂಗದಳ್ಳಿ, ಎಂಜಿನಿಯರ್ ಎಸ್.ಎಸ್. ಸಜ್ಜನ ಗ್ರಾ.ಪಂ. ಸದಸ್ಯ ಬಸಪ್ಪ ಮೊಸಳಿ, ರಮಜಾನ್ ಮುಜಾವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಂ ಕೋನರಡ್ಡಿ, ಪಿಎಸ್‌ಐ ವೆಂಕಟೇಶ ಮುರನಾಳ, ಎಂಜಿನಿಯರ್‌ರಾದ ಸಿ.ಬಿ. ಚಿಕ್ಕಲಗಿ, ಸಂಜು ಹಿರೋಳ್ಳಿ, ಗುತ್ತಿಗೆದಾರ ಬಿ.ವೈ. ಈಳಗೇರಿ ಉಪಸ್ಥಿತರಿದ್ದರು.ತಹಶೀಲ್ದಾರ ಮಹಾದೇವಪ್ಪ ಮುರಗಿ ಸ್ವಾಗತಿಸಿದರು, ಪ್ರಕಾಶ ಸೊನ್ನದ  ನಿರೂಪಿಸಿದರು. ಎನ್.ಜಿ. ಮಂಗಲಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry