ಬಿಜೆಪಿ–ಸೇನೆ ಮೈತ್ರಿ ಮಾತುಕತೆ

7
ಮಹಾರಾಷ್ಟ್ರ; ಸೀಟು ಹಂಚಿಕೆ ಬಿಕ್ಕಟ್ಟು

ಬಿಜೆಪಿ–ಸೇನೆ ಮೈತ್ರಿ ಮಾತುಕತೆ

Published:
Updated:

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆ  ಸೀಟು ಹಂಚಿಕೆಗೆ ಸಂಬಂಧಿಸಿದಂತೆ  ಮೈತ್ರಿ ಒಪ್ಪಂದಕ್ಕೆ ಬರಲು ಬಿಜೆಪಿ ಮತ್ತು ಶಿವಸೇನೆಯ ಹಿರಿಯ ಮುಖಂಡರು ಮಂಗಳವಾರ ಇಲ್ಲಿ ಚರ್ಚೆ ಆರಂಭಿಸಿದ್ದಾರೆ.

ಶಿವಸೇನೆ ಹಿರಿಯ ಮುಖಂಡ ಸುಭಾಷ್‌ ದೇಸಾಯಿ, ಪಕ್ಷದ ವಕ್ತಾರ ಸಂಜಯ್‌ ರಾವತ್‌ ಮಂಗಳವಾರ ಇಲ್ಲಿನ ಬಿಜೆಪಿ ಕಚೇರಿ ವಸಂತ ಸ್ಮೃತಿ ಭವನಕ್ಕೆ ಮಾತುಕತೆಗಾಗಿ ಆಗಮಿ­ಸಿದರು. ಬಿಜೆಪಿಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಓಂ ಮಾಥುರ್‌ ಕೂಡ ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಕ್ಟೋಬರ್‌ 15ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ, ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ನಡುವೆ ತೆರೆಮರೆಯಲ್ಲಿ ಬಿರುಸಿನ ಚಟು­ವಟಿಕೆಗಳು ನಡೆಯುತ್ತಿವೆ.ಬಿಜೆಪಿ 130 ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಶಿವಸೇನೆಗೆ ಹೊಸ ಪ್ರಸ್ತಾವನೆ ಕಳುಹಿಸಿದೆ. ಆದರೆ, ಸೇನೆ ಮುಖ್ಯಸ್ಥ ಉದ್ಭವ್‌ ಠಾಕ್ರೆ ಬಿಜೆಪಿಗೆ 119 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಉಳಿದ 151 ಸ್ಥಾನಗಳಲ್ಲಿ ಸೇನೆ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry