ಬಿಜೆಪಿ ಅಧ್ಯಕ್ಷರಾಗಿ ರಾಜ್‌ನಾಥ್‌ಸಿಂಗ್ ಅವಿರೋಧ ಆಯ್ಕೆ

7

ಬಿಜೆಪಿ ಅಧ್ಯಕ್ಷರಾಗಿ ರಾಜ್‌ನಾಥ್‌ಸಿಂಗ್ ಅವಿರೋಧ ಆಯ್ಕೆ

Published:
Updated:
ಬಿಜೆಪಿ ಅಧ್ಯಕ್ಷರಾಗಿ ರಾಜ್‌ನಾಥ್‌ಸಿಂಗ್ ಅವಿರೋಧ ಆಯ್ಕೆ

ನವದೆಹಲಿ (ಪಿಟಿಐ): ನಿತಿನ್ ಗಡ್ಕರಿ ಅವರ ರಾಜೀನಾಮೆಯಿಂದ ತೆರವಾದ ಬಿಜೆಪಿ ಅಧ್ಯಕ್ಷ ಗಾದಿಗೆ ರಾಜ್‌ನಾಥ್‌ಸಿಂಗ್ ಅವರು ಅವಿರೋಧವಾಗಿ ಬುಧವಾರ ಆಯ್ಕೆಯಾದರು.ಇಲ್ಲಿ ಸಭೆ ಸೇರಿದ್ದ ಪಕ್ಷದ ಸಂಸದೀಯ ಮಂಡಲಿಯಲ್ಲಿ ರಾಜ್‌ನಾಥ್ ಅವರೊಬ್ಬರೇ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಗಡ್ಕರಿ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳಿಂದ ಅಧ್ಯಕ್ಷ ಹುದ್ದೆಗೆ ಮತ್ತೆ ಸ್ಪರ್ಧಿಸದೇ ಇರಲು ತೀರ್ಮಾನಿಸಿದರು.ಹೀಗಾಗಿ 61 ವರ್ಷ ವಯಸ್ಸಿನ ಉತ್ತರಪ್ರದೇಶದ ರಾಜ್‌ನಾಥ್‌ಸಿಂಗ್ ಅವರು ಅವಿರೋಧವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry