ಶನಿವಾರ, ಫೆಬ್ರವರಿ 27, 2021
23 °C
‘ಮನೆ ಮನೆಗೆ ಬಿಜೆಪಿ’ ಕಾರ್ಯಕ್ರಮಕ್ಕೆ ಚಾಲನೆ

ಬಿಜೆಪಿ ಅಭ್ಯರ್ಥಿ ಉದಾಸಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಭ್ಯರ್ಥಿ ಉದಾಸಿ ಪಾದಯಾತ್ರೆ

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದ್ದು, ‘ಮನೆ ಮನೆಗೆ ಬಿಜೆಪಿ’ ಎನ್ನುವ ವಿಶೇಷ ಕಾರ್ಯಕ್ರಮದ ಮೂಲಕ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.ಭಾನುವಾರ ಬೆಳಿಗ್ಗೆ ಬಿಜೆಪಿ ಶಹರದ ಘಟಕದ ನೇತೃತ್ವದಲ್ಲಿ ಇಜಾರಿಲ ಕಮಾಪುರ ನಗರದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಿವಕುಮಾರ ಉದಾಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.ನಂತರ ಇಜಾರಿಲಕಮಾಪುರ ಪ್ರದೇಶದಲ್ಲಿನ ಮನೆಗಳಿಗೆ ತೆರಳಿ ಬಿಜೆಪಿ ನೇತೃತ್ವದ ಎನ್‌ಡಿಎ ವರ್ಸ್‌ಸ್‌ ಕಾಂಗ್ರೆಸ್‌ ನೇತೃತ್ವದ ಯುಪಿಎ, ಯುಪಿಎ ಮೈತ್ರಿಕೂಟದ 100 ಹಗರಣಗಳು ಎನ್ನುವ ಕಿರುಪುಸ್ತಕ ಗಳನ್ನು ಹಾಗೂ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ ಕರಪತ್ರಗಳನ್ನು ಮತದಾರರಿಗೆ ನೀಡುವ ಮೂಲಕ ಮತಯಾಚನೆ ಮಾಡಿದರು.ನಂತರ ಹಾವೇರಿ ತಾಲ್ಲೂಕಿನ ಅಗಡಿ, ಕನವಳ್ಳಿ, ಬರಡಿ, ಬಸಾಪುರ, ಯಲಗಚ್ಚ, ಹಾವನೂರು, ಗುತ್ತಲ  ಕರ್ಜಗಿ ಗ್ರಾಮಗಳಲ್ಲಿ  ಪಾದಯಾತ್ರೆ ಮೂಲಕ ಮತಯಾಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಘಟಕದ ಅದ್ಯಕ್ಷ ಭೋಜರಾಜ ಕರೂದಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರಾದ ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಗಂಗಾಧರ ಮಲೇಬೆನ್ನೂರ, ರಾಜ್ಯ ಸಮಿತಿಯ ಸದಸ್ಯ ನಾಗೇಂದ್ರ ಕಟಕೋಳ, ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ಮಹಿಳಾ ಮೊರ್ಚಾ ಅದ್ಯಕ್ಷೆ ಮಂಜುಳಾ ಕರಬಸಮ್ಮನವರ, ಯುವ ಮೊರ್ಚಾ ಅದ್ಯಕ್ಷ ಪ್ರದೀಪ ಮುಳ್ಳೂರು, ತಾಲ್ಲೂಕು ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ನಗರಸಭಾ ಸದಸ್ಯರಾದ ಸುರೇಶ ದೊಡ್ಡಮನಿ, ಹನಮಂತಪ್ಪ ದೇವಗಿರಿ ಇರ್ಪಾನ್‌ ಪಠಾನ್‌, ಶಿವಬಸವ ವನಹಳ್ಳಿ, ಲಲಿತಾ ಗುಂಡೇನಹಳ್ಳಿ, ಗೀತಾ ಜುಜಗಾಂವ, ಜಗದೀಶ  ಮಲಗೋಡ, ಕರಬಸಪ್ಪ ಹಳದೂರ, ಸತೀಶ ಹಾವೇರಿ, ಪರಶುರಾಮ ಮೈಲಾ ರಪ್ಪನವರ, ಶಹರ ಘಟಕದ ಅಧ್ಯಕ್ಷೆ ಜ್ಯೋತಿ ಸಾತೇನಹಳ್ಳಿ, ಮಾಜಿ ಸದಸ್ಯ ರಾದ ಗಿರೀಶ ತುಪ್ಪದ, ಮುಖಂಡರಾದ ಸೋಮಶೇಖರ್‌, ಪ್ರಭು ಹಿಟ್ನಳ್ಳಿ, ಸೌಭಾಗ್ಯ ಹಿರೇಮಠ, ಸಂತೋಷ ಆಲದಕಟ್ಟಿ, ವೇದವ್ಯಾಸ ಕಟ್ಟಿ, ಶ್ರೀಪಾದ ಬೆಟಗೇರಿ, ವೆಂಕಟೇಶ ದೈವಜ್ಞೆ, ಸುರೇಶ ಹೊಸಮನಿ, ಅಲ್ಲಾಬಕ್ಷ ತಿಮ್ಮಾಪುರ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.