ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿಭಟನೆ ಇಂದು

ಸೋಮವಾರ, ಜೂಲೈ 22, 2019
27 °C

ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿಭಟನೆ ಇಂದು

Published:
Updated:

ಗದಗ: ರಂಗನಾಥ ಮಿಶ್ರಾ ಆಯೋಗದ ವರದಿ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ವತಿಯಿಂದ ಇದೇ 7ರಂದು ನಗರದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 11ಕ್ಕೆ ನಗರದ ಗಾಂಧಿ ವೃತ್ತದ್ಲ್ಲಲಿ ಧರಣಿ ನಡೆಯಲಿದ್ದು, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಶಾಸಕ ಶ್ರೀಶೈಲಪ್ಪ ಬಿದರೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹುಬ್ಬಳ್ಳಿ ಸೇರಿದಂತೆ ಪಕ್ಷದ  ಎಲ್ಲ ಪದಾಧಿಕಾರಿಗಳು ಪಾಲ್ಗೊಳ್ಳ ಲಿದ್ದಾರೆ ಎಂದು ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ. ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನೀರಿನ ಘಟಕ ಉದ್ಘಾಟನೆ ಇಂದು

ಗದಗ:
ಕೆ.ಎಚ್. ಪಾಟೀಲ ಪ್ರತಿಷ್ಠಾನ ಗದಗ, ಆರ್.ಎಂ.ಎ.ಎಸ್. ಹುಲಕೋಟಿ ಹಾಗೂ ಜಿ.ಸಿ.ಟಿ.ಎಂ. ಹುಲಕೋಟಿ ಆಶ್ರಯದಲ್ಲಿ ಬೆಟಗೇರಿ ರಸ್ತೆಯಲ್ಲಿರುವ ಗಾಂಧಿನಗರ ಮಾರುತಿ ದೇವಸ್ಥಾನದ ಸಮೀಪದ ಶುದ್ಧ ನೀರಿನ ಘಟಕದ ಉದ್ಘಾಟನೆಯು ಈ ತಿಂಗಳ 7 ರಂದು ನಡೆಯಲಿದೆ.ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿ ಸುವರು. ಬೆಟಗೇರಿಯ ಸೇಂಟ್ ಇಗ್ನೇಶಿಯಸ್ ಲಯೊಲಾ ಚರ್ಚ್‌ನ ಫ್ರಾನ್ಸಿಸ್ ಲಾರ್ಡ್‌ಸ್ವಾಮಿ ಹಾಗೂ ಮಾಜಿ ಸಚಿವರಾದ ಎಚ್. ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ. ಆರ್. ಪಾಟೀಲ ಅವರು ಶುದ್ಧ ನೀರನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವರು.ನಗರಸಭೆ ಅಧ್ಯಕ್ಷ ಶಿವಪ್ಪ ಮುಳಗುಂದ, ಉಪಾಧ್ಯಕ್ಷೆ ಖಮರ ಸುಲ್ತಾನ ನಮಾಜಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ನಗರಸಭೆ ಸದಸ್ಯರಾದ ಲಕ್ಷ್ಮೀದೇವಿ ಕಟ್ಟಿಮನಿ, ಸುರೇಶ ಕಟ್ಟಿಮನಿ, ವೀಣಾ ಕಟ್ನಳ್ಳಿ, ಯಶೋಧಾಬಾಯಿ ಲಕ್ಷ್ಮಣಸಾ ಮೇರವಾಡೆ ಅವರುಗಳು ಶುದ್ಧನೀರಿನ ಮೊದಲ ಕ್ಯಾನುಗಳನ್ನು ಪಡೆಯುವ ಮೂಲಕ ಯೋಜನೆ ಪ್ರಾರಂಭಿಸಲಿದ್ದಾರೆ ಎಂದು ಗುರಣ್ಣಾ ಬಳಗಾನೂರ, ಆರ್. ಎಂ.ಮೂಲಿಮನಿ, ಐ.ಎಸ್.ಅಂಗಡಿ ಮತ್ತು ವಿ.ಕೆ. ಚಿಂತಾಮಣಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry