ಶನಿವಾರ, ಜೂನ್ 19, 2021
29 °C

ಬಿಜೆಪಿ, ಕಾಂಗ್ರೆಸ್‌ಗಳೇ ಎದುರಾಳಿ: ಎಎಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್‌): ಲೋಕ­ಸಭೆ ಚುನಾವಣೆಯ ದಿನಾಂಕಗಳ ಘೋಷ­ಣೆ­­ಯನ್ನು ಆಮ್‌ ಆದ್ಮಿ ಪಕ್ಷ ಸ್ವಾಗತಿ­ಸಿದ್ದು, ಚುನಾ­ವಣೆಯಲ್ಲಿ  ಪ್ರಮುಖ  ಪಕ್ಷ­ಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಡು­ವುದಾಗಿ ಹೇಳಿದೆ.‘ಭ್ರಷ್ಟಾಚಾರವನ್ನು ಕಿತ್ತೊಗೆ­ಯು­ವುದೇ ಎಎಪಿಯ ಮುಖ್ಯ ಗುರಿ. ಮುಂದಿನ ಸಾರ್ವಜನಿಕ ಚುನಾವಣೆ­ಯಲ್ಲಿ ಇದೇ ನಮ್ಮ ನಡೆಯಾಗಲಿದೆ’ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ನಾಗೇಂದ್ರ ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದರು.‘ನಾವು ಈಗಾಗಲೇ ಚುನಾವಣಾ ಆಂದೋಲನದಲ್ಲಿ ವಿಶ್ವಾಸದಿಂದ ಇದ್ದೇವೆ. ಈ ಕಾರಣಕ್ಕಾಗಿಯೇ ನಮ್ಮ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಮೂರು ಪಟ್ಟಿಯಲ್ಲಿ ಘೋಷಿಸಿದ್ದೇವೆ. ಅಲ್ಲದೇ, ಈ ಸಾರ್ವಜನಿಕ ಚುನಾ­ವಣೆ­ಯಲ್ಲಿ ನಾವು ಕಾಂಗ್ರೆಸ್‌ ಮತ್ತು ಬಿಜೆಪಿಗೆ  ಹಣಾಹಣಿ ಸ್ಪರ್ಧೆಯನ್ನು ನೀಡುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.2012ರ ನವೆಂಬರ್‌ನಲ್ಲಿ ಆರಂಭ­ವಾದ ಆಮ್‌ ಆದ್ಮಿ ಪಕ್ಷ ಲೋಕಸಭೆ ಚುನಾವಣೆ ಎದುರಿಸಲು ವಿಶ್ವಾಸ ವ್ಯಕ್ತಪಡಿಸಿದೆ. ದೆಹಲಿಯಲ್ಲಿ 49 ದಿನ­ಗಳ ಕಾಲ ಸರ್ಕಾರ ನಡೆಸಿರುವ ಎಎಪಿ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 350 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿ­ಗಳನ್ನು ಕಣಕ್ಕೆ ಇಳಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.