ಗುರುವಾರ , ಜೂನ್ 24, 2021
23 °C

ಬಿಜೆಪಿ ಗೆಲ್ಲಿಸಿ: ಮೋದಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಭಾರತದ ಭಾಗ್ಯ ನಿರ್ಮಾತೃ­ಗಳೇ ಸುನಾಮಿ ಅಲೆಯಂತೆ ನೀವೆಲ್ಲರೂ ಇಲ್ಲಿ ಸೇರಿದ್ದೀರಿ. ಜನರಿಗೆ ದ್ರೋಹ ಬಗೆದ ಕಾಂಗ್ರೆಸ್‌ ಮೇಲೆ ಯಾವುದೇ  ಕಾರ­ಣಕ್ಕೂ ಭರವಸೆ ಇಡಬೇಡಿ. ಭಾರತದ ಭಾಗ್ಯ ಬದಲಾಯಿಸಲು ಬಿಜೆಪಿಯನ್ನು ಗೆಲ್ಲಿಸಿ. ದೇಶ ಉಳಿಸಿ, ಕಾಂಗ್ರೆಸ್ ಓಡಿಸಿ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದರು.ಗುಲ್ಬರ್ಗದ ಜೇವರ್ಗಿ ರಸ್ತೆಯಲ್ಲಿ­ರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶುಕ್ರ­ವಾರ ಆಯೋ­ಜಿಸಿದ್ದ ‘ಭಾರತ ಗೆಲ್ಲಿಸಿ ರ್‍ಯಾಲಿ’ಯಲ್ಲಿ ಅವರು ಮಾತನಾಡಿ­ದರು.ಸೀಮಾಂಧ್ರಕ್ಕೆ ಶೀಘ್ರ ಭೇಟಿ: ‘ದಸ್ ನಂ­ಬರಿ ಸೋನಿಯಾ ನೇತೃತ್ವದ (10 ಜನಪಥ ರಸ್ತೆಯ ನಿವಾಸಿ) ಯುಪಿಎ ಸರ್ಕಾರ ಸೀಂಮಾಂಧ್ರ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಂಧ್ರ­ಪ್ರದೇಶ ವಿಭಜಿಸಿರುವ ವಿಧಾನ ಸರಿ­ಯಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾಡುವ ಮೂಲಕ ಅಲ್ಲಿನ ಜನರ ಭಾವನೆಗಳನ್ನು ಹೊಸಕಿ ಹಾಕಿದೆ. ತಾಯಿಯನ್ನು ಕೊಲೆ ಮಾಡಿ ಮಗು­ವನ್ನು ರಕ್ಷಿಸಿಸುವ ಕೆಲಸ ಮಾಡಿದೆ. ಇದರಿಂದಾಗಿ ಸೀಮಾಂಧ್ರದ ಜನತೆ ಅನಾಥವಾಗಿದ್ದಾರೆ. ಆದ್ದರಿಂದ ಅಲ್ಲಿನ ಜನರ ಕಣ್ಣೀರು ಒರೆಸಲು ಶೀಘ್ರವೇ ಸೀಮಾಂಧ್ರಕ್ಕೆ ಭೇಟಿ ನೀಡುತ್ತೇನೆ’ ಎಂದು ಹೇಳಿದರು. ಸುಮಾರು 40 ನಿಮಿಷ ಮಾತನಾಡಿದ ಅವರು ತಮ್ಮ ಭಾಷಣ­ದುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪಟೇಲ್ ಗುಣಗಾನ: ‘ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿತು. ಆದರೆ, ಹೈದರಾಬಾದ್ ಕರ್ನಾಟಕ 1948ರಲ್ಲಿ ವಿಮೋಚನೆ ಹೊಂದಿತು. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಧೈರ್ಯದಿಂದ ಹೋರಾಡಿದ್ದರ ಫಲ­ವಾಗಿ ಹೈದರಾಬಾದ್‌ ಕರ್ನಾಟಕ ಭಾಗವು ಗಣತಂತ್ರದಲ್ಲಿ ಸೇರಿತು. ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಮೋಚನೆ ಕೊಡಿ­ಸುವ ಮೂಲಕ ನಿಜಾಮರ ಆಡಳಿತ ಅಂತ್ಯಗೊಳಿಸಿದರು’ ಎಂದು ಸ್ಮರಿಸಿದರು.ಬೀದರ್, ಯಾದಗಿರಿ, ಗುಲ್ಬರ್ಗ, ರಾಯಚೂರು ಹಾಗೂ ವಿಜಾಪುರ ಜಿಲ್ಲೆಗಳ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದೇ ವೇದಿಕೆಯಲ್ಲಿ ಮಾಜಿ ಸಚಿವ ರಾಜೂಗೌಡ (ನರಸಿಂಹ ನಾಯಕ) ಜೆಡಿಎಸ್‌ ತೊರೆದು ಬಿಜೆಪಿ ಸೇರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.