ಮಂಗಳವಾರ, ಮೇ 11, 2021
21 °C

ಬಿಜೆಪಿ ಜತೆಗಿನ ಜೆಡಿಯು ಮೈತ್ರಿ ಅಂತ್ಯ: ಶರದ್ ಯಾದವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ(ಪಿಟಿಐ): ಬಿಜೆಪಿ ಜತೆಗಿನ ತನ್ನ 17 ವರ್ಷದ ಮೈತ್ರಿಯನ್ನು ಅಂತ್ಯಗೊಳಿಸಿರುವುದಾಗಿ ಜನತಾ ದಳ- ಯುನೈಟೆಡ್(ಜೆಡಿಯು)ನ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಭಾನುವಾರ ಪ್ರಕಟಿಸಿದರು.ಜೆಡಿಯು, ಎನ್‌ಡಿಎ ಜತೆಗಿನ ಮೈತ್ರಿಯಿಂದ ಹೊರ ಬಂದಿರುವ ನಿರ್ಧಾರವನ್ನು ಪಕ್ಷದ ಎಲ್ಲ ಮುಖಂಡರ ಜತೆ ಚರ್ಚಿಸಿ ಕೈಗೊಳ್ಳಲಾಗಿದೆ ಎಂದು ಬಿಹಾರದ ಆಡಳಿತಾರೂಢ ಜೆಡಿಯುನ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.ನಿರ್ಧಾರ ಬದಲಾವಣೆ ಇಲ್ಲ: ಬಿಜೆಪಿ

ಕಾನ್ಪುರ(ಐಎಎನ್‌ಎಸ್):
ಜೆಡಿಯು ಬಿಜೆಪಿ ಜತೆಗಿನ ಮೈತ್ರಿ ಅಂತ್ಯಗೊಳಿಸಿ ನಿಧಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಮಿತಿ ಸಾರಥ್ಯವನ್ನು ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ವಹಿಸಿರುವ ನಿರ್ಧಾರದಿಂದ ಹಿಂದೆ ಸರಿಯುವ ಹಾಗೂ ಆ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೇಳಿದೆ.ಮೋದಿಗೆ ಸಾರಥ್ಯ ನೀಡಿರುವುದು ಪಕ್ಷದ ಆಂತರಿಕ ವಿಚಾರ. ಮೈತ್ರಿ ವಿಚಾರ ಎನ್‌ಡಿಎಗೆ ಬಿಟ್ಟದ್ದು ಎಂದು ಬಿಜೆಪಿ ಉಪಾಧ್ಯಕ್ಷ  ಮುಖ್ತಾರ್ ಅಬ್ಬಾಸ್ ನೆಕ್ವಿ ಹೇಳಿದ್ದಾರೆ.ದುರದೃಷ್ಟಕರ

`ಜೆಡಿಯು ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವುದು ದುರದೃಷ್ಟಕರ'

-ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.