ಗುರುವಾರ , ಜೂನ್ 17, 2021
28 °C

ಬಿಜೆಪಿ ಜತೆ ಮೈತ್ರಿಗೆ ಡಿಎಂಡಿಕೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ನಟ ವಿಜಯಕಾಂತ್‌ ನೇತೃತ್ವದ ತಮಿಳು­ನಾಡು ವಿರೋಧ ಪಕ್ಷ ಡಿಎಂಡಿಕೆಯು ಲೋಕಸಭಾ ಚುನಾ­ವಣೆಯಲ್ಲಿ ಮೈತ್ರಿಗೆ ಮುಂದಾ­ಗಿದ್ದು ಬಿಜೆಪಿಯೊಂದಿಗೆ ಮಾತುಕತೆ ಆರಂಭಿಸಿದೆ.ಮೈತ್ರಿಗೆ ಸಿದ್ಧ ಎಂದು ಡಿಎಂಡಿಕೆ ಸಾರ್ವಜನಿಕವಾಗಿ ಹೇಳಿರುವುದು ಸಂತಸ ತಂದಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಪೊನ್ ರಾಧಾಕೃಷ್ಣನ್‌ ಹೇಳಿದ್ದಾರೆ.ಏಪ್ರಿಲ್‌ 24ರಂದು ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳನ್ನು ಎದುರಿಸಲು ಡಿಎಂಡಿಕೆ ಮತ್ತು ಪಿಎಂಕೆಯೊಂದಿಗೆ ಬಿಜೆಪಿ ಹಲವು ದಿನಗಳಿಂದ ಮಾತುಕತೆ ನಡೆಸುತ್ತಿದೆ.ಎಂಡಿಎಂಕೆಯೊಂದಿಗೆ ಸೀಟು ಹಂಚಿಕೆಯ ಕರಡು ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸಿದೆ. ಆದರೆ ಕೆಲವು ಕ್ಷೇತ್ರಗಳಿಗಾಗಿ ಎರಡೂ ಪಕ್ಷಗಳು ಪಟ್ಟು ಹಿಡಿದಿದ್ದರಿಂದಾಗಿ ಸೀಟು ಹಂಚಿಕೆ ಅಂತಿಮಗೊಳಿಸಲು ಸಾಧ್ಯ­ವಾಗಿಲ್ಲ. ಶೀಘ್ರವೇ ಸೀಟು ಹಂಚಿಕೆ ಒಪ್ಪಂದ­ವನ್ನು ಬಹಿರಂಗಪಡಿಸ­ಲಾಗುವುದು ಎಂದು ತಮಿಳುನಾಡು ಬಿಜೆಪಿ  ಘಟಕ ಹೇಳಿದೆ.ಜಯಾ ಜತೆ ಎಡಪಕ್ಷಗಳ ಮೈತ್ರಿ ಇಲ್ಲ

ಚೆನ್ನೈ (ಪಿಟಿಐ):
ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮ­ಗೊಳಿಸುವಲ್ಲಿ ಅನು­ಸರಿಸುತ್ತಿರುವ ಧೋರಣೆಯಿಂದ ಬೇಸರಗೊಂಡಿರುವ ಸಿಪಿಎಂ ಮತ್ತು ಸಿಪಿಐ ಸುಮಾರು ಒಂದು ತಿಂಗಳ ಹಿಂದೆ ಕಾರ್ಯರೂಪಕ್ಕೆ ಬಂದ ಜಯಲಲಿತಾ ಅವರ ನೇತೃತ್ವದ ಎಐಎಡಿಎಂಕೆಯೊಂದಿಗಿನ ಮೈತ್ರಿಯಿಂದ ಹೊರ ನಡೆದಿವೆ. ಎರಡೂ ಎಡಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿವೆ.ಸೀಟು ಹಂಚಿಕೆಗೆ ಸಂಬಂಧಿಸಿ ನಡೆದ ಹಲವು ಸುತ್ತಿನ ಮಾತುಕತೆಗಳಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಬಲವಾದ ಹೋರಾಟ ನಡೆಸುವುದಕ್ಕಾಗಿ  ಎಐಎಡಿಎಂಕೆ ಜೊತೆ ಹೊಂದಾಣಿಕೆಗೆ ನಿರ್ಧರಿಸಲಾಗಿತ್ತು. ಆದರೆ ಅದು ಈಗ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಸಿಪಿಎಂ ಮತ್ತು ಸಿಪಿಐ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.2009ರ ಲೋಕಸಭೆ ಮತ್ತು 2011ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆಯು ಎಡಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.