ಗುರುವಾರ , ಜೂನ್ 24, 2021
29 °C

ಬಿಜೆಪಿ ಜತೆ ವಿಲೀನ ಆಗಿಲ್ಲ: ಎಲ್‌ಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಜೆಪಿ-­ಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ತಮ್ಮ ಕ್ಷೇತ್ರಗಳ ಜನರಲ್ಲಿ ಉಂಟಾಗಿರುವ ತಳಮಳ­­ಗಳನ್ನು ಕುಗ್ಗಿಸಲು ದಲಿತ ಮುಖಂಡ­ರಾದ ರಾಂ ವಿಲಾಸ್‌ ಪಾಸ್ವಾನ್‌ ಮತ್ತು ರಾಮ್‌ದಾಸ್‌ ಅಠವಳೆ ಯತ್ನಿಸಿದ್ದಾರೆ.‘ನಾವು ಬಿಜೆಪಿಯೊಂದಿಗೆ ವಿಲೀನ­ಗೊಂಡಿಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಎನ್‌ಡಿಎಗೆ ಸೇರಿದ್ದೇವೆ’ ಎಂದು ಅವರು ಹೇಳಿದ್ದಾರೆ.ನರೇಂದ್ರ ಮೋದಿ ಅವರ ಕುರಿತಾಗಿ ಅಲ್ಪಸಂಖ್ಯಾತ ಸಮುದಾಯದವರಿಗೆ ಅಸಮಾಧಾನವಿದೆ ಎಂಬುದನ್ನು ಒಪ್ಪಿ­ಕೊಂಡಿರುವ ಲೋಕಜನಪಕ್ಷದ (ಎಲ್‌ಜೆಪಿ) ಮುಖ್ಯಸ್ಥರಾಗಿರುವ ಪಾಸ್ವಾನ್‌, ತಮ್ಮ ಪಕ್ಷವು ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿದೆ. ಪಕ್ಷದ ಸಾಮಾಜಿಕ ಕಳಕಳಿಯಲ್ಲಿ ಯಾವುದೇ ಬದಲಾವಣೆ­ಯಾಗಿಲ್ಲ ಎಂದು ಅವರು ಹೇಳಿದ್ದಾರೆ.‘ಆರ್‌ಜೆಡಿ ಮತ್ತು ಕಾಂಗ್ರೆಸ್‌, ಎಲ್‌ಜೆಪಿಯ ‘ತೇಜೋವಧೆ’ ಮಾಡಿದ ಬಳಿಕ ನಮಗೆ ಬೇರೆ ಯಾವುದೇ ಆಯ್ಕೆಗಳು ಇಲ್ಲದೇ ಇದ್ದುದರಿಂದ ಬಿಜೆಪಿ­ಯೊಂದಿಗೆ ಮೈತ್ರಿ ಮಾಡ­ಬೇಕಾಯಿತು’ ಎಂದೂ ಅವರು ಹೇಳಿದ್ದಾರೆ.‘ಯುಪಿಎ ಬಿಡುವ ವಿಷಯದಲ್ಲಿ ನಮ್ಮಲ್ಲಿ ಎರಡು ಅಭಿಪ್ರಾಯಗಳು ಇರಲೇ ಇಲ್ಲ.  ನನ್ನ ಅಗತ್ಯ ಅಲ್ಲಿ ಇಲ್ಲ ಎಂದು ನನಗೆ ಅನಿಸಿತು. ಹಾಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುವ  ಪಕ್ಷದ ನಿರ್ಧಾರವನ್ನು ಅನುಮೋದಿಸಿದೆ’ ಎಂದು ಪಾಸ್ವಾನ್‌ ತಿಳಿಸಿದ್ದಾರೆ.ಪಾಸ್ವಾನ್‌ ಕುಟುಂಬದ ಮೂವರು ಕಣಕ್ಕೆ

ಪಟ್ನಾ (ಐಎಎನ್‌ಎಸ್‌):
ಲೋಕಸಭೆ ಚುನಾವಣೆಗೆ ಲೋಕ ಜನಶಕ್ತಿ ಪಕ್ಷವು  (ಎಲ್‌ಜೆಪಿ) ಶನಿವಾರ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಪಕ್ಷದ ಅಧ್ಯಕ್ಷ ರಾಂ ವಿಲಾಸ್‌ ಪಾಸ್ವಾನ್‌   ಕುಟುಂಬದ ಮೂವರು ಸದಸ್ಯರಿದ್ದಾರೆ.ರಾಂ ವಿಲಾಸ್‌ ಪಾಸ್ವಾನ್‌ ಅವರು ಬಿಹಾರದ ಹಾಜೀಪುರ, ಅವರ ಪುತ್ರ ಚಿರಾಗ್‌ ಅವರು ಜಮುಯಿ ಮತ್ತು ಪಾಸ್ವಾನ್‌ ಅವರ ಸಹೋದರ ರಾಮಚಂದರ್‌ ಪಾಸ್ವಾನ್‌  ಸಮಷ್ಟಿಪುರ ಕ್ಷೇತ್ರದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಾಜೀಪುರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದೇನೆ’ ಎಂದು ರಾಂ ವಿಲಾಸ್‌ ಪಾಸ್ವಾನ್‌ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಅಪರಾಧ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ ರಾಂ ಸಿಂಗ್‌ ಮತ್ತು ವೀಣಾ ಸಿಂಗ್‌ ಅವರಿಗೆ ಕ್ರಮವಾಗಿ ವೈಶಾಲಿ ಮತ್ತು ಮಂಗೇರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಪಕ್ಷದ ವಕ್ತಾರ ಸತ್ಯಾನಂದ ಶರ್ಮಾ ನಲಂದಾದಿಂದ ಸ್ಪರ್ಧಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.