ಶುಕ್ರವಾರ, ಜೂನ್ 18, 2021
25 °C

ಬಿಜೆಪಿ ಜೊತೆ ಕಲ್ಯಾಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಐಎಎನ್‌ಎಸ್‌): ಕಳೆದ ವಾರವಷ್ಟೇ ನೂತನ ಪಕ್ಷ ಸ್ಥಾಪಿ­ಸಿರುವ ತೆಲುಗು ನಟ ಪವನ್‌ ಕಲ್ಯಾಣ್‌,   ಚುನಾ­ವಣೆ­ಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.‘ಕಾಂಗ್ರೆಸ್‌ ಹಟಾವೋ, ದೇಶ್‌ ಬಚಾವೋ’ (ಕಾಂಗ್ರೆಸ್‌ ಕಿತ್ತೊಗೆಯಿರಿ, ದೇಶ ಉಳಿಸಿ) ಎಂಬ ಘೋಷಣೆ­ಯೊಂದಿಗೆ ಜನಸೇನಾ ಪಕ್ಷ ಆರಂಭಿ­ಸಿರುವ ಪವನ್‌, ಶೀಘ್ರದಲ್ಲೇ ದೆಹಲಿ­ಯಲ್ಲಿ ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.ಆಂಧ್ರದಲ್ಲಿ ಸೀಟು ಹೊಂದಾಣಿಕೆಗೆ ಸಂಬಂಧಿಸಿ ಈಗಾಗಲೇ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮಧ್ಯೆ ಮಾತುಕತೆ ನಡೆದಿದೆ. ಈ ಬೆನ್ನಲ್ಲೆ ಪವನ್‌ ಕಲ್ಯಾಣ್‌ ಬಿಜೆಪಿ ಮುಖಂಡರನ್ನು ಭೇಟಿಯಾ­ಗುತ್ತಿ­ರುವುದು ನೋಡಿದರೆ ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಈ ಮೂರೂ ಪಕ್ಷಗಳ ಮಧ್ಯೆ ಮೈತ್ರಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.