ಮಂಗಳವಾರ, ನವೆಂಬರ್ 12, 2019
28 °C

ಬಿಜೆಪಿ ದುರಾಡಳಿತಕ್ಕೆ ಬೇಸತ್ತ ಜನತೆ: ಎಚ್ಕೆ

Published:
Updated:

ಗದಗ: ಬಿಜೆಪಿ ಸರಕಾರ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ ಹೇಳಿದರು.ತಾಲ್ಲೂಕಿನ ಹರ್ತಿ ಗ್ರಾಮದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ರಾಜ್ಯದ 1.50 ಸಾವಿರ ಕೋಟಿ ರೂಪಾಯಿ  ಮೌಲ್ಯದ ಸಂಪತ್ತು ಲೂಟಿಯಾಗಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ವಚನ ಭ್ರಷ್ಟ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದರು

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ. ಎಸ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ನೋಡಿ ಪಕ್ಷಕ್ಕೆ ಆಗಮಿಸಿರುವುದಾಗಿ ಹೇಳಿದರು.ಹಿರಿಯರಾದ ಕುಬೇರಪ್ಪ ಸಿ. ಬಂಗಿ, ಶಿವಪ್ಪ ಹುರಕಡ್ಲಿ, ವೀರಭದ್ರಪ್ಪ ನವಲಿ, ರಾಚಪ್ಪ ನವಲಿ, ಗ್ರಾಪಂ ಮಾಜಿ ಸದಸ್ಯ ವಿ. ಡಿ. ರೆಡ್ಡೇರ, ಚನ್ನಬಸಪ್ಪ ಅಸುಂಡಿ, ಬಸವರಾಜ ಕೋರಿಶೆಟ್ಟರ, ಹನಮಂತಪ್ಪ ಹೊಸಳ್ಳಿ, ಎಂ. ಎನ್. ಪಾಟೀಲ, ಬಸವರಾಜ ಜವಲಿ, ಬಿ. ಸಿ. ಹೊಸೂರ, ಹನಮಂತಪ್ಪ ಕಂಬಳಿ, ಹುಲಗೆಪ್ಪ ಹರ್ಲಾಪೂರ, ಬಸಪ್ಪ ಹರ್ಲಾಪೂರ, ಈರಪ್ಪ ಹೊನ್ನಪ್ಪನವರ, ಮೊಟೆಪ್ಪ ಲದ್ದಿ, ಯೋಗೇಶ ಒಪ್ಪತ್ತಯ್ಯನಮಠ, ವೀರಭದ್ರಪ್ಪ ಗಣಾಚಾರಿ ಸೇರಿದಂತೆ ಮುಂತಾದವರು ಪಕ್ಷಕ್ಕೆ ಸೇರ್ಪಡೆಗೊಂಡರುಮಾಜಿ ಶಾಸಕ ಡಿ. ಆರ್. ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ ಹರ್ಲಾಪೂರ, ಬಸವೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಎ. ಎಸ್. ಕೊಟ್ಟರಶೆಟ್ಟಿ, ಎಪಿಎಂಸಿ ಸದಸ್ಯೆ ಟೊಪಮ್ಮ ಹೊನ್ನಪ್ಪನವರ, ಮಾಜಿ ಅಧ್ಯಕ್ಷ ಟಿ. ಬಿ. ಸೋಮರೆಡ್ಡಿ, ಮುಳಗುಂದ ಬ್ಲಾಕ್ ಕಮೀಟಿ ಅಧ್ಯಕ್ಷ ಪಿ. ಎಂ. ಬಂದಕ್ಕನವರ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಎಚ್. ಜಿ. ಹಿರೇಗೌಡರ, ಮಾಜಿ ಅಧ್ಯಕ್ಷ ಎಸ್. ಎಸ್. ಪಾಟೀಲ (ಕಣವಿ), ಗ್ರಾ.ಪಂ. ಸದಸ್ಯರಾದ ಗೂಳಪ್ಪ ಗುಡದೂರ, ಚನ್ನಮ್ಮ ಕುರ್ತಕೋಟಿ, ಸಿ. ವಿ. ಪಾಟೀಲ, ಪರಶುರಾಮ ಹಡಪದ, ಜಿ. ಕೆ. ಸೋಮರೆಡ್ಡಿ ಪಾಲ್ಗೊಂಡಿದರು. ರಾಜೀವ್‌ಗಾಂಧಿ ಪಂಚಾಯತ್      ರಾಜ್ಯ ಸಂಘಟನೆ ತಾಲ್ಲೂಕು ಸಂಚಾಲಕ    ಪ್ರಭು ಹುಡೇದ ಸ್ವಾಗತಿಸಿದರು.         ಬಿ. ಬಿ. ಹೊನ್ನಪ್ಪನವರ   ವಂದಿಸಿದರು.

ಪ್ರತಿಕ್ರಿಯಿಸಿ (+)