ಬುಧವಾರ, ನವೆಂಬರ್ 13, 2019
22 °C

ಬಿಜೆಪಿ ದುರಾಡಳಿತ ಪಕ್ಷ: ಆರೋಪ

Published:
Updated:

ನರಗುಂದ: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರವು ಹಿಂದೆಂದೂ ಕಂಡರಿಯದಷ್ಟು ದುರಾಡಳಿತ ನೀಡಿದೆ. ಅದು ಹೋಗಬೇಕಾಗಿದೆ. ಆದರೆ  ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಮರ್ಥ ಜನಪರ ಹಾಗೂ ಸಾಮಾಜಿಕ ನ್ಯಾಯವ ನ್ನೊಳಗೊಂಡ ಆಡಳಿತ  ನೀಡಲು ಸಾಧ್ಯ.ಇದಕ್ಕಾಗಿ  ಕಾಂಗ್ರೆಸ್‌ಗೆ ಮತನೀಡಿ ಸ್ಪಷ್ಟ ಬಹುತ ಸಾಧಿಸಲು ಬೆಂಬಲಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಗಾಂಧಿಚೌಕ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದರು.  ಪ್ರಾಮಾಣಿಕ ಹಾಗೂ ದೇಶ, ರಾಜ್ಯವನ್ನು ಮುನ್ನಡೆ ಸುವ ನಾಯಕತ್ವ ಕಾಂಗ್ರೆಸ್‌ಗಿದೆ. ಉಳಿದ ಯಾವ ಪಕ್ಷಗಳಿಗೂ ಇಲ್ಲ.

ಕಾಂಗ್ರೆಸ್ ಪಕ್ಷದಿಂದ  ಸ್ವಾತಂತ್ರ್ಯ ಪಡೆಯು ವುದರಿಂದ ಹಿಡಿದು ಹಿಂದುಳಿದ, ದೀನದ ದಲಿತರ ಏಳ್ಗೆಯನ್ನು ಸಾಧಿಸಲಾಗಿದೆ. ಮಹದಾಯಿ ಯೋಜನೆ, ಕೃಷ್ಣಾ ಬೀಸ್ಕಿಂ ಹಾಗೂ 30 ಕೆಜಿ  ಅಕ್ಕಿ ಸೇರಿದಂತೆ ವಿವಿಧ ಜನಪರ ಯೋಜನೆಗಳ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದರು.ಬಿಜೆಪಿ, ಕೆಜೆಪಿ, ಜೆಡಿಎಸ್  ಪಕ್ಷಗಳಿಂದ  ಅಭಿವೃದ್ಧಿ ಸಾಧ್ಯವಿಲ್ಲ.  ಕಳೆದ ಐದು ವರ್ಷಗಳಲ್ಲಿ ನಡೆದ ಬಿಜೆಪಿ ಕರ್ಮಕಾಂಡ  ತಮಗೆಲ್ಲ ಗೊತ್ತಿದೆ. ಆದ್ದರಿಂದ ಮತದಾರ ಪ್ರಭುಗಳು ಕಾಂಗ್ರೆಸ್‌ಗೆ ಮತ ನೀಡಬೇಕಾಗಿದೆ.   

ಸಮ್ರಿಶ್ರ ಸರಕಾರಕ್ಕೆ ಅವಕಾಶ ಕೊಡಬೇಡಿ. ಸಮ್ರಿಶ್ರ ಸರಕಾರದಿಂದ ರಾಜ್ಯದ ಪ್ರಗತಿ ಅಸಾಧ್ಯ ಗೂಂಡಾ ಸಂಸ್ಕೃತಿಗೆ ಅವಕಾಶ ನೀಡದೇ ಯಾವಗಲ್‌ರವರನ್ನು ಬೆಂಬಲಿಸುವಂತೆ ಮನವಿ  ಮಾಡಿದರು. ಜೆಡಿಎಸ್ ಅಪ್ಪ ಮಕ್ಷಳ ಪಕ್ಷ ಅದು  ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿವೆ.

ಅಂಥಹವುಗಳಿಗೆ ಮತ ನೀಡದೇ ಯಾವಗಲ್‌ರಿಗೆ ಮತ ನೀಡಿ ಎಂದು ಹೇಳಿದರು.   ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ ಮಾತ ನಾಡಿ `ಕಾಂಗ್ರೆಸ್ ಸರಕಾರವಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಆದರೆ ಕಳೆದ ಐದು  ವರ್ಷಗಳಲ್ಲಿ ಬಿಜೆಪಿ ಸರಕಾರ ದುರಾಡಳಿತ  ನೀಡಿದೆ ಹೊರತು ಯಾವುದೇ ಅಭಿವೃದ್ಧಿ ಯೋಜನೆ ಸಾಕಾರಗೊಂಡಿಲ್ಲ ಎಂದು ಆರೋಪಿಸಿದರು.ಕಾಂಗ್ರೆಸ್ ಮುಖಂಡರಾಸ ದಶರಥ ಗಾಣಿಗೇರ, ಚಂಬಣ್ಣ ವಾಳದ, ದ್ಯಾಮಣ್ಣ ಸವ ದತ್ತಿ, ಎಂ.ಎಚ್.ತಿಮ್ಮನಗೌಡ್ರ, ಎಫ್.ವೈ.ದೊಡಮನಿ, ಬಿ.ಸಿ.ಬ್ಯಾಳಿ, ದೇಸಾ ಯಿಗೌಡ ಪಾಟೀಲ, ಗಿರೀಶ ಪಾಟೀಲ, ಡಾ.ಎಸ್. ಎಚ್.ಹುರಳಿ, ರವಿ ದಂಡಿನ, ಎಸ್. ಆರ್.ಪಾಟೀಲ, ವಿಠ್ಠಲ ಶಿಂಧೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)