ಭಾನುವಾರ, ಜೂನ್ 20, 2021
25 °C

ಬಿಜೆಪಿ-ದೂರವಾಣಿ; ಕಾಂಗ್ರೆಸ್-ಪತ್ರಿಕೆ ವಿತರಣೆ!

ಪ್ರಜಾವಾಣಿ ವಾರ್ತೆ/ ಕೆ.ಎಂ.ಸಂತೋಷ್ ಕುಮಾರ್ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಎಲ್ಲ ಪಕ್ಷಗಳೂ ಅಮೂಲ್ಯ ಮತಕ್ಕಾಗಿ ಮತದಾರರನ್ನು ಒಲಿಸಿಕೊಳ್ಳಲು ವಿವಿಧ ಬಗೆಯ ಸರ್ಕಸ್ ಮಾಡುತ್ತಿವೆ. ಅಭ್ಯರ್ಥಿಗಳೂ ಮತದಾರರನ್ನು ಓಲೈಸಲು ಸಂತೆ, ಜಾತ್ರೆ, ಮಾರ್ಕೆಟ್ ಅರಸಿ ಹೋಗುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಭಿನ್ನ ಪ್ರಚಾರ ಮಾರ್ಗ ಹುಡುಕಿಕೊಂಡಿವೆ. ಬಿಜೆಪಿ ಮೊಬೈಲ್ ಮೂಲಕ ಮತದಾರರ `ಕಿವಿ~ಗೆ ಲಗ್ಗೆ ಇಟ್ಟಿದ್ದರೆ, ಕಾಂಗ್ರೆಸ್ `ವಾರ ಪತ್ರಿಕೆ~ಯೊಂದನ್ನು ಮನೆಗಳಿಗೆ ಹಂಚುತ್ತಾ ಪ್ರಚಾರ ನಡೆಸಿದೆ.`ಹಲೋ ಸರ್/ಮೇಡಂ ನಮಸ್ಕಾರ. ನಾವು ಬಿಜೆಪಿ ಕಚೇರಿಯಿಂದ ಕರೆ ಮಾಡ್ತಿದೀವಿ. ನಿಮ್ಮ ಅಮೂಲ್ಯ ಮತವನ್ನು ಅಭ್ಯರ್ಥಿ ಸುನೀಲ್ ಕುಮಾರ್ ಅವರಿಗೇ ಕೊಡಬೇಕು~ ಎನ್ನುವ ವಿನಂತಿಯ ಕರೆ ಕ್ಷೇತ್ರ ವ್ಯಾಪ್ತಿಯ ಮತದಾರರ ಮೊಬೈಲ್‌ಗೆ ಹೋಗುತ್ತಿದೆ.`ಹಲೋ ಟ್ಯೂನ್ ಕೇಳಿ ಆನಂದಿಸಿ~ ಎನ್ನುವ ಸರ್ವಿಸ್ ಸೆಂಟರ್‌ಗಳ ಕರೆಗಳ ಕಿರಿಕಿರಿ, `ನಿಮ್ಮ ಹೆಸರಿಗೆ ಲಕ್ಷ ಮೌಲ್ಯದ ಉಚಿತ ಪಾಲಿಸಿ ಬಂದಿದೆ. ದಂಪತಿ ಸಮೇತ ಬಂದು ತೆಗೆದುಕೊಂಡು ಹೋಗಿ~ ಎನ್ನುವ ಮಾನಿನಿಯರು ಕರೆ, ಖಾಸಗಿ ಕಂಪೆನಿಗಳ ವಿವಿಧ ಪ್ರಚಾರದ ದೂರವಾಣಿ ಕರೆಗಳ ಜತೆಗೆ ಈಗ ಬಿಜೆಪಿ ಮತಯಾಚನೆ ಕರೆಯೂ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಉಪ ಚುನಾವಣೆಯಲ್ಲಿ ಮೊಬೈಲ್ ಮೂಲಕ ರವಾನೆ ಆಗುತ್ತಿದೆ.ಬಿಜೆಪಿ ಜಿಲ್ಲಾ ಘಟಕ ರಾಜ್ಯ ಸರ್ಕಾರದ ಸಾಧನೆಯ ಕರಪತ್ರವನ್ನು ಡೋರ್-ಟು-ಡೋರ್ ತಲುಪಿಸುತ್ತಿ ರುವಂತೆ, ಅಭ್ಯರ್ಥಿ ಪರ ಪ್ರಚಾರಕ್ಕೆ ಮತದಾರರನ್ನು ಸುಲಭವಾಗಿ ಸಂಪರ್ಕಿಸಲು ಮೊಬೈಲ್ ಮೊರೆ ಹೋಗಿದೆ.ಇದಕ್ಕಾಗಿಯೇ ಬಿಜೆಪಿ ಕಚೇರಿ `ಪಾಂಚ ಜನ್ಯ~ದಲ್ಲಿ ನಾಲ್ವರು ಯುವತಿಯರು ಮೊಬೈಲ್, ಸ್ಥಿರ ದೂರವಾಣಿ ಚಂದದಾರರಿಗೆ ಕರೆ ಮಾಡಿ, ಅಭ್ಯರ್ಥಿ ಪರ ಮತ ಯಾಚಿಸುತ್ತಿದ್ದಾರೆ. ಅತ್ತಲಿಂದ ಬರುವ ಪ್ರತಿಕ್ರಿಯೆಯನ್ನೂ ದಾಖಲಿಸಿ ಕೊಂಡು ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಸ್ಥಳೀಯ ಶಾಸಕರಿಗೆ ಒಪ್ಪಿಸು ತ್ತಿದ್ದಾರೆ. ಕರೆ ಮಾಡುವ ಯವತಿಯರಿಗೆ ಸಕಾರಾತ್ಮಕ, ನಕರಾತ್ಮಕ ಎರಡೂ ಬಗೆಯ ಪ್ರತಿಕ್ರಿಯೆ ಸಿಗುತ್ತಿವೆ.`3-4 ದಿನಗಳಿಂದ ಮೊಬೈಲ್ ಮತಯಾಚನೆ ನಡೆದಿದೆ. ಪ್ರತಿದಿನ 250ರಿಂದ 300 ಮೊಬೈಲ್ ಮತ್ತು ದೂರವಾಣಿ ಗ್ರಾಹಕರನ್ನು ಸಂಪರ್ಕಿಸುತ್ತಿದ್ದೇವೆ. ಜನರಿಂದ ಸಕರಾತ್ಮಕ ಸ್ಪಂದನೆ ಇದೆ. ಬಹಳಷ್ಟು ಜನ ರಸ್ತೆ, ಕುಡಿಯುವ ನೀರು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಪಡಿತರ ಚೀಟಿ ಬಗ್ಗೆ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅವನ್ನು ದಾಖಲಿಸಿ ಕೊಳ್ಳು ತ್ತಿದ್ದೇವೆ~ ಎಂದು ಯುವತಿಯೊಬ್ಬರು ಶನಿವಾರ `ಪ್ರಜಾವಾಣಿ~ಗೆ ತಿಳಿಸಿದರು.ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವ ಕೆಲ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮೆಚ್ಚುಗೆ ಮಾತು ಬರೆದಿರುವ `ವಾರ ಪತ್ರಿಕೆ~ಯೊಂದರ ಪ್ರತಿ ಗಳನ್ನು ಮನೆಮನೆಗೆ ಉಚಿ ವಾಗಿ ಹಂಚುತ್ತಿದ್ದಾರೆ. ಜೆಡಿಎಸ್ ಮತ್ತು ಜೆಡಿಯು ಅಭ್ಯರ್ಥಿಗಳ ಕರಪತ್ರ ಮಹಿಳೆಯರು ಮನೆ ಮನೆಗೆ ತಲುಪಿಸುತ್ತಿರುವುದು ನಗರದಲ್ಲಿ ಕಂಡುಬರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.