ಭಾನುವಾರ, ನವೆಂಬರ್ 17, 2019
29 °C

ಬಿಜೆಪಿ ನಡಿಗೆ ಜೈಲಿನ ಕಡೆಗೆ: ಪರಮೇಶ್ವರ್

Published:
Updated:

ಹಿರಿಯೂರು: ಕಾಂಗ್ರೆಸ್‌ಗೆ ಅಪಾರ ಜನಪರ ಕಾಳಜಿಯಿದ್ದು, ತನ್ನ ನಡಿಗೆಯನ್ನು ಹಳ್ಳಿಯ ಕಡೆಗೆ ಎಂದು ಹೊರಟಿದ್ದರೆ... ಜೆಡಿಎಸ್ ನಡಿಗೆ ಮನೆಯ ಕಡೆಗೆ... ಬಿಜೆಪಿ ನಡಿಗೆ ಜೈಲಿನ ಕಡೆಗೆ... ಎಂದು ಕೆಪಿಸಿಸಿ ಅಧ್ಯಕ್ಷಡಾ.ಪರಮೇಶ್ವರ್ ವ್ಯಂಗ್ಯವಾಡಿದರು.ನಗರದ ಲಕ್ಷ್ಮಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಸರ್ಕಾರದ ಸಾಧನೆಗಳ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಅರಿವು ಮೂಡಿಸುವ ಮೂಲಕ ಕಾಂಗ್ರೆಸ್  ಬಲಪಡಿಸಬೇಕು ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೇಂದ್ರದಿಂದ ಜಾರಿಯಾಗಿರುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸರ್ಕಾರ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಖಾತ್ರಿ ಯೋಜನೆ ಹಣ ಬಿಟ್ಟರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ.

ಆದರೆ,  ಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಂಬ್ಯುಲೆನ್ಸ್ ವಾಹನಗಳ ಮೇಲೆ ಅವರ ಭಾವಚಿತ್ರ ಹಾಕಿಸಿಕೊಂಡು ಮೆರೆಯುತ್ತಿದ್ದಾರೆ. ಇಂತಹ ನಾಚಿಕೆಗೆಟ್ಟ ಸರ್ಕಾರವನ್ನು ಇದುವರೆಗೂ ರಾಜ್ಯ ಕಂಡಿಲ್ಲಎಂದು ಪರಮೇಶ್ವರ್ ಟೀಕೆ ಮಾಡಿದರು.ಹಿರಿಯೂರಿನಲ್ಲಿ ಪಕ್ಷಕ್ಕೆ ತನ್ನದೇ ಆದ ಕಚೇರಿ ಇಲ್ಲದಿರುವುದು ವಿಷಾದದ ಸಂಗತಿ. ಒಂದು ವಾರದ ಒಳಗೆ ಪಕ್ಷದ ಕಚೇರಿ ಆರಂಭಿಸಬೇಕು ಎಂದು ತಾಕೀತು ಮಾಡಿದ ಅವರು ಸ್ವಂತ ಕಟ್ಟಡ ನಿರ್ಮಾಣಕ್ಕೆ ್ಙ 1 ಲಕ್ಷ ದೇಣಿಗೆ ನೀಡುವೆ ಎಂದರು.ತಾಲ್ಲೂಕಿನಲ್ಲಿ ನಗರ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಮಾತ್ರ ಆಯ್ಕೆ ಮಾಡಿದ್ದು, ಉಳಿದ ಸಮಿತಿಯನ್ನು ನೇಮಕ ಮಾಡದಿರುವ ಕಾರಣ ಸಂಘಟನೆಗೆ ಹಿನ್ನಡೆಯಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಆಯ್ಕೆ ಮಾಡಬೇಕು ಎಂದು ಜಿ. ಧನಂಜಯಕುಮಾರ್, ಎಚ್.ಎನ್. ನರಸಿಂಹಯ್ಯ, ಅಷ್ವಕ್ ಅಹಮದ್, ನವಾಬ್‌ಜಾನ್, ಬಿ.ಎಚ್. ವೆಂಕಟೇಶ್ ಮತ್ತಿತರರು ಒತ್ತಾಯ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಚ್. ಮಂಜುನಾಥ್, ಸಿ. ತಿಪ್ಪೇಸ್ವಾಮಿ, ಮುಖಂಡರಾದ ಗೀತಾನಂದಿನಿಗೌಡ, ಸಿ. ಮಹಾಲಿಂಗಪ್ಪ, ಡಾ.ತಿಪ್ಪೇಸ್ವಾಮಿ, ಎಂ.ಎ. ಸೇತೂರಾಂ, ನೂರುಲ್ಲಾ ಷರೀಫ್, ಕೆ. ಶಿವಮೂರ್ತಿ, ಮಂಜುಳಾ ವೆಂಕಟೇಶ್, ಡಿ. ಶಿವಣ್ಣ, ಕರಿಯಮ್ಮ, ಯತೀಶ್, ಖಾದಿ ರಮೇಶ್, ಎ. ಮಂಜುನಾಥ್, ಮಹಮದ್ ಫಕೃದ್ದೀನ್, ವಿ. ವೆಂಕಟೇಶ್, ಎ.ಎಂ. ಅಮೃತೇಶ್ವರಸ್ವಾಮಿ, ಚಂದ್ರಶೇಖರ್, ಜಬೀವುಲ್ಲಾ, ಬಿ. ದಲೀಚಂದ್, ಕೃಷ್ಣಮೂರ್ತಿ, ದೇವರಾಜ್, ಎಂ.ಡಿ. ರವಿ, ಬಿ. ಕೆಂಚಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)