ಸೋಮವಾರ, ಜೂನ್ 14, 2021
21 °C

ಬಿಜೆಪಿ ನಾಯಕರಿಂದ ದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದಿನಕ್ಕೊಂದು ನಿಲುವು ತಾಳುತ್ತ  ತಮ್ಮದೇ ಪಕ್ಷದ  ಸರ್ಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ. ಅವರ ನಡವಳಿಕೆ ಸಮಯ ಸಾಧಕತನದ ಪರಾಕಾಷ್ಠೆ. ಬಿಜೆಪಿಗೆ ಬಗ್ಗೆ ಜನರು ಇಟ್ಟ ವಿಶ್ವಾಸಕ್ಕೆ ಯಡಿಯೂರಪ್ಪ ಮತ್ತವರ ಸಂಗಡಿಗರು ದ್ರೋಹ ಬಗೆದಿದ್ದಾರೆ. ಜನರಿಗೆ ಉತ್ತಮ ಆಡಳಿತ ಬೇಕು. ಭಿನ್ನ ಮತ ಅಲ್ಲ.ರಾಜ್ಯದ 123 ತಾಲ್ಲೂಕುಗಳಲ್ಲಿ ಬರಗಾಲವಿದೆ. ಜನರಿಗೆ ಕುಡಿಯುವ ನೀರಿಲ್ಲ. ಹೈದರಾಬಾದ್  ಕರ್ನಾಟಕದಲ್ಲಿ ತೊಗರಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರಾಜ್ಯದ ರೈತರು ಹಾಗೂ ಜನರು ತೊಂದರೆಯಲ್ಲಿರುವಾಗ ಅವರ ನೆರವಿಗೆ ಬಾರದೆ ಬಿಜೆಪಿ ನಾಯಕರು ಭಿನ್ನಮತೀಯ ಚಟುವಟಿಕೆಗಳಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಬಿಜೆಪಿ ನಾಯಕರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ.

                            

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.