ಬಿಜೆಪಿ ಭ್ರಷ್ಟಾಚಾರದ ಮಡು- ಲೇವಡಿ

7

ಬಿಜೆಪಿ ಭ್ರಷ್ಟಾಚಾರದ ಮಡು- ಲೇವಡಿ

Published:
Updated:
ಬಿಜೆಪಿ ಭ್ರಷ್ಟಾಚಾರದ ಮಡು- ಲೇವಡಿ

ಕುಷ್ಟಗಿ: “ಬಿಜೆಪಿಯಲ್ಲಿ ಭ್ರಷ್ಟಾಚಾರ ಮಡುಗಟ್ಟಿದೆ. ಇನ್ನು 2- 3 ತಿಂಗಳಲ್ಲಿ ಆ ಪಕ್ಷದ ಬಹುತೇಕ ಮುಖಂಡರು ಜೈಲು ಸೇರಲಿದ್ದಾರೆ” ಎಂದು ಮಾಜಿ ಸಚಿವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಸಾಲೊಣಿ ಬುಧವಾರ ಭವಿಷ್ಯ ನುಡಿದರು.ಎಪಿಎಂಸಿ ಚುನಾವಣೆ ಹಿನ್ನೆಲೆಯಲ್ಲಿ ಬುತ್ತಿಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.“ಭೂಗಳ್ಳತನದಲ್ಲಿ ಸಿಕ್ಕಿಹಾಕಿಕೊಂಡಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರ ಪುತ್ರನ ವಿರುದ್ಧದ ಗಂಭೀರ ಪ್ರಕರಣದಲ್ಲೂ ನ್ಯಾಯಾಧೀಶರು ಜಾಮೀನು ನೀಡುತ್ತಾರೆ ಎಂದರೆ ಅದಕ್ಕೆ ಅಚ್ಚರಿಪಡಬೇಕಿಲ್ಲ, ಹಣದಿಂದ ಬಿಜೆಪಿ ಎಲ್ಲರನ್ನೂ ಖರೀದಿಸಿದೆ” ಎಂದು ಹೇಳಿದರು.ಹಿಂದೆ ಬಿಜೆಪಿಯಲ್ಲಿ ಹಣವೇ ಇರಲಿಲ್ಲ, ಹಿಂದೆ ಬಿಜೆಪಿ ಸೇರಿದಾಗ ಆ ಪಕ್ಷದವರು ನೀಡಿದ ರೂ. 2 ಲಕ್ಷ ಹಣವನ್ನು ಸಂಗಣ್ಣ ಕರಡಿ ಮುಖಕ್ಕೆ ಎಸೆದಿದ್ದರು. ಆದರೆ ಅವರಿಗೆ ಈಗ ಎಷ್ಟೆಷ್ಟು ಕೋಟಿ ಹಣ ಕೊಟ್ಟು ಖರೀದಿಸಿದ್ದಾರೊ ಗೊತ್ತಿಲ್ಲ ಎಂದು ಕುಟುಕಿದರು.ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಗಣಿ ಮತ್ತಿತರ ಮೂಲಗಳಿಂದ ಹಣ ಹರಿದು ಬರುತ್ತದೆ ಎಂಬ ಆತಂಕ ಜೆಡಿಎಸ್ ಕಾರ್ಯಕರ್ತರಿಗೆ ಬೇಡ, ಬುದ್ಧಿವಂತ ಮತದಾರರು ಹಣ ನೀಡಿದವರನ್ನೇ ತಿರಸ್ಕರಿಸಿರುವ ಹಲವಾರು ಉದಾಹರಣೆಗಳಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕುದರಿಮೋತಿ, ದೇವೇಂದ್ರಪ್ಪ ಬಳೂಟಗಿ, ಅಮರೇಗೌಡ ಪಾಟೀಲ, ಪ್ರಕಾಶ ರಾಠೋಡ, ತಾ.ಪಂ ಸದಸ್ಯೆ ಸುವರ್ಣಮ್ಮ, ಸಿ.ಎಂ.ಹಿರೇಮಠ ಮೊದಲಾದವರು ಮಾತನಾಡಿದರು.ಜಿ.ಪಂ ಮಾಜಿ ಸದಸ್ಯರಾದ ದೊಡ್ಡಯ್ಯ ಗದ್ದಡಕಿ, ಮಾಲತಿ ನಾಯಕ, ಮುಖಂಡರಾದ ಶಿವಪ್ಪ ನೀರಾವರಿ, ಡಾ.ಬಿ.ಎಂ.ಗೌಡರ್, ಎಂ.ಡಿ.ಇನಾಯತ್‌ಸಾಬ್, ಶರಣಪ್ಪ ಗೋಪಾಳಿ, ಸಂಗಮೇಶ ಕುಷ್ಟಗಿ, ಹುಸೇನ್ ಬುಡ್ಡಾ, ಸೋಮಶೇಖರ ವೈಜಾಪೂರ ಇತರರು ವೇದಿಕೆಯಲ್ಲಿದ್ದರು. ಜಗದೀಶ ಹಿರೇಮಠ ನಿರೂಪಿಸಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry