ಶುಕ್ರವಾರ, ಜನವರಿ 24, 2020
17 °C
ವಾರ್ಡ್‌ ಸಭೆಯಲ್ಲಿ ಟೀಕಾಕಾರರಿಗೆ ಶಾಸಕ ಟಿ.ವೆಂಕಟರಮಣಯ್ಯ ತಿರುಗೇಟು

ಬಿಜೆಪಿ ಮಾತಿನಲ್ಲಿ ಸತ್ಯಾಂಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ‘ನಗರೋತ್ಥಾನ ಯೋಜನೆಯಡಿ ಯಲ್ಲಿ ರೂ 15 ಕೋಟಿ  ಕಾಮಗಾರಿ ಸೇರಿದಂತೆ  ಹಲವು ಪ್ರಗತಿಪರ ಕಾಮ ಗಾರಿಗಳು ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಯಾಗಿದ್ದವು ಎಂದು ನಗರಸಭೆಯ ಬಿಜೆಪಿ ಸದಸ್ಯರು ಹೇಳುತ್ತಿರುವ ಮಾತಿನಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಶಾಸಕ ಟಿ.ವೆಂಕರಮಣಯ್ಯ ತಿರುಗೇಟು ನೀಡಿದರು.ನಗರದ 28ನೇ ವಾರ್ಡ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಮಾಜಿ ಶಾಸಕರ ಆಡಳಿತದಲ್ಲಿ ಯೋಜನೆ ಜಾರಿಯಾಗಿದ್ದರೆ ಸರ್ಕಾರದ ಆದೇಶ ಪತ್ರ ತಂದು ತೋರಿಸಲಿ. ನಗರ ದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದವರು ಮಾಡುವ ಆರೋಪಗಳನ್ನು ಗಂಭೀರವಾಗಿ ಪರಿಗಣಿ ಸುವ ಅಗತ್ಯ ಇಲ್ಲ. ಯಾರ ಕಾಲದಲ್ಲಿ  ಎಷ್ಟು ಕೆಲಸಗಳಾಗಿವೆ ಎನ್ನುವುದನ್ನು ಅರಿಯದಷ್ಟು ದಡ್ಡರಲ್ಲ ಕ್ಷೇತ್ರದ ಮತ ದಾರರು. ಪಕ್ಷಭೇದ ಮರೆತು ನಗರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚಿಂತನೆ ನಡೆಸಬೇಕು’ ಎಂದರು.ವಾರ್ಡ್‌ ಸಭೆಯಲ್ಲಿ ಮಾತನಾಡಿದ, ಸ್ಥಳೀಯ ನಿವಾಸಿ ರಾಜಣ್ಣ, ಟಿ.ಎಸ್‌. ಮಹಾದೇವ್‌, ‘ನಗರ ಸಭೆ ವ್ಯಾಪ್ತಿಯ ಜನವಸತಿ ಪ್ರದೇಶಗಳ ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಬೇಲಿ ಗಿಡಗಳನ್ನು ಕಿತ್ತು ಸ್ವಚ್ಚವಾಗಿಟ್ಟು ಕೊಳ್ಳುವಂತೆ ನಿವೇಶನದ ಮಾಲೀಕರಿಗೆ ಸೂಚನೆ ನೀಡಬೇಕು. ಸೋಮೇಶ್ವರ ಬಡಾವಣೆಯ ಮುಖ್ಯರಸ್ತೆಯಲ್ಲಿ ಕ್ರೀಡಾಂಗಣ ಇರುವುದರಿಂದ ಪ್ರತಿದಿನ ಸಾವಿರಾರು ಜನ ಓಡಾಡುತ್ತಾರೆ. ಈ ರಸ್ತೆಗೆ ಡಾಂಬರು ಹಾಕುವ ಮೂಲಕ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.ವಾರ್ಡ್‌ ಸಭೆಯಲ್ಲಿ ಮಾತನಾಡಿದ ಡಾ.ಎ.ಓ.ಆವಲಮೂರ್ತಿ ‘ನಗರ ದಲ್ಲಿರುವ ಏಕೈಕ ಪಾರ್ಕ್‌ ಸುತ್ತಲಿನ ರಸ್ತೆ, ಚರಂಡಿಗಳನ್ನು ದುರಸ್ತಿ ಮಾಡಿಸಬೇಕು. ಇದೇ ಮಾದರಿಯಲ್ಲಿ ನಗರದ ಇತರೆಡೆಗಳಲ್ಲೂ ಪಾರ್ಕ್‌ಗಳ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.28ನೇ ವಾರ್ಡ್ ಸದಸ್ಯ ವಡ್ಡರಹಳ್ಳಿ ರವಿ ವಾರ್ಡ್‌ನಲ್ಲಿ ಆಗಬೇಕಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಾಗೂ ಸಮಸ್ಯೆಗಳ ಮನವಿ ಮತ್ರವನ್ನು ಶಾಸಕ ರಿಗೆ ಸಲ್ಲಿಸಿದರು. ಪೌರಾಯುಕ್ತ ಡಾ.ಪಿ. ಬಿಳಿಕೆಂಚಪ್ಪ, ತಾ.ಪಂ.ಸದಸ್ಯೆ ಶ್ಯಾಮ ಲಮ್ಮ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)