ಗುರುವಾರ , ಜೂನ್ 17, 2021
22 °C

ಬಿಜೆಪಿ ಮುಖಂಡರಲ್ಲಿ ಮಿಶ್ರಾ ಕ್ಷಮೆ ಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ತಮಗೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಕ್ಕೆ ಬಿಜೆಪಿ ಮುಖಂಡರ ವಿರುದ್ಧ ಆರೋಪಗಳನ್ನು ಮಾಡಿದ್ದ ಅನಿವಾಸಿ ಭಾರತೀಯ ಉದ್ಯಮಿ ಅಂಶುಮಾನ್ ಮಿಶ್ರಾ ಇದೀಗ ರಾಗ ಬದಲಿಸಿದ್ದು, ತಮ್ಮ ಹೇಳಿಕೆಗಾಗಿ ಸೋಮವಾರ ಕ್ಷಮೆ ಯಾಚಿಸಿದ್ದಾರೆ.ಇಂತಹ ಆರೋಪಕ್ಕಾಗಿ ಅರುಣ್ ಜೇಟ್ಲಿ ಅವರು ತಮಗೆ ನೋಟಿಸ್ ಕಳುಹಿಸಿದ ಬೆನ್ನಲ್ಲಿಯೇ, ಮಿಶ್ರಾ ಅವರು ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ, ಯಶವಂತ್ ಸಿನ್ಹ ಹಾಗೂ ಜೇಟ್ಲಿ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.ಬಿಜೆಪಿಯಲ್ಲಿ ಕೆಲವರ ಬೆಂಬಲದೊಂದಿಗೆ ಮಿಶ್ರಾ ಜಾರ್ಖಂಡ್‌ನಿಂದ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ನಂತರದಲ್ಲಿ ಬಿಜೆಪಿ ಮುಖಂಡರು ನಿಲುವು ಬದಲಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.