ಶುಕ್ರವಾರ, ಮೇ 7, 2021
21 °C

ಬಿಜೆಪಿ ಮೂಲ ಕಾರ್ಯಕರ್ತರ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: `ರಾಜ್ಯದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಕಡೆಗಣಿಸುತ್ತಿರುವುದು ಅಲ್ಲದೇ ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ಆಡಳಿತರೂಢ ನಾಯಕರು ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯರ ವೇದಿಕೆ  ಅಧ್ಯಕ್ಷ ಬಿ.ಬಿ.ಶಿವಪ್ಪ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ದೂರಗೊಳಿಸಿ ಈಚೆಗೆ ಪಕ್ಷಕ್ಕೆ ಸೇರಿದವರಿಗೆ ಆದ್ಯತೆ ನೀಡಲಾಗುತ್ತಿದೆ. ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಬೇರೆ ಪಕ್ಷಗಳಿಂದ ಬಂದಿರುವವರಿಗೆ ಸ್ಥಾನಮಾನ ನೀಡಲಾಗುತ್ತಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ನಾನು ಬಿಜೆಪಿ ಅಧ್ಯಕ್ಷನಾಗಿದ್ದಾಗ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಬಲಪಡಿಸಿದ್ದೆ. ಹಿಂದುತ್ವದ ಆಧಾರದ ಮೇಲೆ ಪಕ್ಷ ಕಟ್ಟಲಾಯಿತು. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ `ಆಪರೇಷನ್ ಕಮಲ~ದ ಹೆಸರಿನಲ್ಲಿ ಹೊರಗಡೆಯಿಂದ ವಲಸೆ ಬಂದ ಕೆಲವರಿಂದ ಎಲ್ಲವೂ ಬದಲಾಗಿ ಹೋಯಿತು. ವಲಸೆ ಬಂದವರು ಯಾರು ಪಕ್ಷದ ತತ್ವ, ಸಿದ್ಧಾಂತ ಮತ್ತು ಆದರ್ಶದ ಮೇಲೆ ನಂಬಿಕೆಯಿಟ್ಟು ಬಂದವರಲ್ಲ~ ಎಂದರು.ಬಿಜೆಪಿ ಪರ್ಯಾಯ ವೇದಿಕೆ ನಿರ್ಮಿಸುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ ಅವರು, `ನಾವು ಬಿಜೆಪಿಯ ಮೂಲ ನಾಯಕರು ಮತ್ತು ಕಾರ್ಯಕರ್ತರು. ನಾವು ಮೂಲ ಪಕ್ಷವನ್ನು ಬಲಪಡಿಸುತ್ತೇವೆ. ರಾಮನಗರ ಜಿಲ್ಲೆಯ ಮಾಗಡಿಯಿಂದ ಸಭೆ ಆರಂಭಿಸಿ ರಾಜ್ಯದ ಇತರ ಭಾಗಗಳಲ್ಲೂ ಸಭೆ ಆಯೋಜಿಸುತ್ತೇವೆ~ ಎಂದರು.ಬಿಜೆಪಿ ಮೂಲ ಕಾರ್ಯಕರ್ತರಾದ ಗೋವಿಂದಪ್ಪ, ಹನುಮಂತರಾಜ್, ನಾಗೇಂದ್ರಕುಮಾರ್, ಶಾಸ್ತ್ರೀಜಿ, ಪೃಥ್ವಿರಾಜ್, ನಾಗರಾಜ್‌ರಾವ್, ಆನಂದ್‌ಕುಮಾರ್, ಸುಬ್ಬರಾವ್, ಕೇಶವಮೂರ್ತಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.