ಗುರುವಾರ , ಫೆಬ್ರವರಿ 25, 2021
30 °C

ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ

ಬೆಳಗಾವಿ: ಬಿಜೆಪಿ ವತಿಯಿಂದ ಲೋಕಸಭಾ ಚುನಾವಣೆಯ ಪ್ರಚಾರಾ­ರ್ಥ­ವಾಗಿ ನಿರ್ಮಿಸಿರುವ ವಿಜಯ ಸಂಕಲ್ಪ ರಥಯಾತ್ರೆಗೆ ನಗರದಲ್ಲಿ ಬುಧವಾರ ಸಂಸದ ಸುರೇಶ ಅಂಗಡಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ಪ್ರಚಾರ­ಕ್ಕಾಗಿ ವಿಜಯ ಸಂಕಲ್ಪ ರಥವನ್ನು ಸಜ್ಜುಗೊಳಿಸಲಾಗಿದ್ದು, ರಥಯಾ­ತ್ರೆಯು ಬೆಳಗಾವಿ ಲೋಕಸಭಾ ಕ್ಷೇತ್ರ­ದಲ್ಲಿ ಸಂಚರಿಸಿ ಬಿಜೆಪಿಯ ಯೋಜನೆ­ಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಿದೆ’ ಎಂದರು.‘ರಥಯಾತ್ರೆಯ ಮೂಲಕವೇ ಜನಸಾಮಾನ್ಯರಿಗೆ ಹತ್ತಿರವಾಗಿರುವ ಬಿಜೆಪಿಯ ಯೋಜನೆಗಳಿಗೆ ಮತದಾರರು ಆಶೀರ್ವದಿಸಬೇಕು. ಬಿಜೆಪಿಗೆ ಬೆಂಬಲ ನೀಡುವ ಮೂಲಕ ನನ್ನನ್ನು ಆರಿಸಿ ತರಬೇಕು’ ಎಂದು ಮನವಿ ಮಾಡಿದರು.ಬಿಜೆಪಿ ಮುಖಂಡ ಅನಿಲ ಬೆನಕೆ, ರಾಜು ಚಿಕ್ಕನಗೌಡರ, ಸಂಜಯ ಭಂಡಾರಿ, ಪ್ರಕಾಶ ಹೊಂಗಲ, ಎಸ್.ಎಸ್. ಕಿವಡಸಣ್ಣವರ, ಮುಕ್ತಾರ್‌ ಪಠಾಣ ಹಾಜರಿದ್ದರು.ಹೈಟೆಕ್‌ ಪ್ರಚಾರ ಚಾಲನೆ

ಬೆಳಗಾವಿ:
ಇಲ್ಲಿನ ನಾರ್ವೇಕರ ಗಲ್ಲಿಯ ಬಿಜೆಪಿ ಬೆಳಗಾವಿ ಲೋಕಭೆ ಕ್ಷೇತ್ರದ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಮಹಿಳಾ ಘಟಕದ ವತಿಯಿಂದ ಹೈಟೆಕ್ ಪ್ರಚಾರಕ್ಕೆ ಚಾಲನೆ ನೀಡಲಾಯಿತು.ಬಿಜೆಪಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭಾರತಿ ಮಗದುಮ್ಮ ಅವರು ‘ಬಿಜೆಪಿ ಬೆಲಗಮ್‌ ಮಹಿಳಾ ಮೋರ್ಚಾ ಫೇಸ್‌ಬುಕ್‌’ ಖಾತೆಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ‘ಬಿಜೆಪಿ ಮೊದಲಿನಿಂದಲೂ ಆಧುನಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವ ನೀಡುತ್ತ ಬಂದಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಭಾರತವು ಮಾಹಿತಿ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆಧುನಿಕ ಜಗತ್ತಿನಲ್ಲಿ ಮುಂಚೂಣಿ ರಾಷ್ಟ್ರವಾಗಿ ಉದಯಿಸಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಿಜೆಪಿಗೆ ಬೆಂಬಲ ನೀಡಬೇಕು’ ಎಂದರು.ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜು ಚಿಕ್ಕನಗೌಡರ ಮಾತನಾಡಿದರು. ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಉಜ್ವಲಾ ಬಡವಾನಾಚೆ, ತೇಜಸ್ವಿನಿ ದಾಕಲೂಚೆ, ಜಯಶೀಲಾ ದೇಸಾಯಿ, ಲೀನಾ ಟೋಪಣ್ಣವರ, ಶೈಲಾ ಹಿರೇಮಠ, ಗೀತಾ ಸುತಾರ, ಆರತಿ ಪಟೋಲೆ, ಸವಿತಾ, ಗಿರಿಜಾ ಬನ್ನೂರ, ಸಾರಿಕಾ ಪಾಟೀಲ, ಪುಷ್ಪಾ ಹುಬ್ಬಳ್ಳಿ, ಶಶಿ ಪಾಟೀಲ, ಶಿವಪ್ರಸಾದ ಕಿತ್ತೂರ, ಪ್ರಕಾಶ ಹೊಂಗಲ ಉಪಸ್ಥಿತರಿದ್ದರು.-

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.