ಬುಧವಾರ, ನವೆಂಬರ್ 13, 2019
23 °C

ಬಿಜೆಪಿ ವಿರುದ್ಧ ನಾಗಾವಾರ ಟೀಕೆ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಘೋಷಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ `ಮೊದಲನೇ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪ್ರಕೃತಿ ಸಂಪತ್ತನ್ನು ಲೂಟಿಮಾಡಿ, ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಸಿತು. ಬಿಜೆಪಿ ಕಾಲದಲ್ಲಿಯೇ ಮುಖ್ಯಮಂತ್ರಿಯೊಬ್ಬ ಜೈಲಿಗೆ ಹೋಗಿದ್ದು' ಎಂದು ಟೀಕಿಸಿದರು. `ಇರುವ ಪಕ್ಷಗಳಿಗೆ ಹೋಲಿಸಿದರೆ, ಕಾಂಗ್ರೆಸ್  ಉತ್ತಮ.  ಪ್ರಜಾಪ್ರಭುತ್ವ ಬಲ ಪಡಿಸಲು, ಕೋಮುಭಾವ ನಿಯಂತ್ರಿಸಲು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇವೆ'  ಎಂದರು.

ಪ್ರತಿಕ್ರಿಯಿಸಿ (+)