ಮಂಗಳವಾರ, ಜೂನ್ 15, 2021
23 °C

ಬಿಜೆಪಿ ವಿರುದ್ಧ ರಾಹುಲ್ ತೀಕ್ಷ್ಣ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಂಗಾಬಾದ್‌, ಮಹಾರಾಷ್ಟ್ರ (ಪಿಟಿಐ): ಬಿಜೆಪಿಯು ‘ಏಕ ವ್ಯಕ್ತಿ’ಯ ಕೈಗೆ ಅಧಿಕಾರ ಒಪ್ಪಿಸಲು ಮುಂದಾಗಿದೆ ಎಂದು ರಾಹುಲ್‌ ಗಾಂಧಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಬುಧವಾರ ಪರೋಕ್ಷ  ವಾಗ್ದಾಳಿ ನಡೆಸಿದರು.

ಇಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯುದ್ದೇಶಿಸಿ ಮಾತನಾಡಿದ ರಾಹುಲ್‌, ‘ದೇಶವನ್ನು ಏಕ ವ್ಯಕ್ತಿ ನಡೆಸುವುದಿಲ್ಲ. ಬದಲಾಗಿ ಕೋಟ್ಯಂತರ ಜನರು ನಡೆಸುತ್ತಾರೆ. ನಿಮ್ಮನ್ನು ಸಶಕ್ತರನ್ನಾಗಿಸುವುದು ನಮ್ಮ ಉದ್ದೇಶ. ಆದರೆ ಬಿಜೆಪಿ ಏಕ ವ್ಯಕ್ತಿಗೆ ಅಧಿಕಾರ ಒಪ್ಪಿಸ ಬಯಸುತ್ತದೆ’ ಎಂದು ಟೀಕಿಸಿದರು.

‘ತಮ್ಮನ್ನು ಹಿಂದು ಎಂದು ಕರೆದುಕೊಳ್ಳುವ ಬಿಜೆಪಿ ಮುಖಂಡರು ಸ್ವತಃ ಗೀತೆಯನ್ನು ಓದಿಲ್ಲ. ಅವರು ಅದನ್ನು ತೆರೆದು ನೋಡಿದ್ದರೇ ಕಾಂಗ್ರೆಸ್‌ ಪಕ್ಷ ಕೇವಲ ಒಂದು ಸಂಘಟನೆಯಲ್ಲ. ಅದೊಂದು ಸಿದ್ಧಾಂತ ಎಂಬುದು ತಿಳಿಯುತ್ತಿತ್ತು’ ಎಂದು ಅಭಿಪ್ರಾಯ ಪಟ್ಟರು.

‘ಕಾಂಗ್ರೆಸ್‌ ಸಿದ್ಧಾಂತವನ್ನು ಯಾರು ಅಳಿಸಲು ಯತ್ನಿಸಿದ್ದಾರೋ ಅವರನ್ನು ದೇಶದಿಂದ ಹೊರಗಟ್ಟಲಾಗಿದೆ. ಬ್ರಿಟಿಷರನ್ನು ಸೋಲಿಸಿದ್ದು ಕಾಂಗ್ರೆಸ್‌ ಅಲ್ಲ. ಬದಲಾಗಿ ಅದರ ಸಿದ್ಧಾಂತ. ಬ್ರಿಟಿಷರನ್ನು ಪ್ರೀತಿಯಿಂದ ಹೊರಗಟ್ಟಿದ ರೀತಿಯೇ ಬಿಜೆಪಿಯನ್ನು ಕಾಂಗ್ರೆಸ್‌ ಹೊರಗಟ್ಟಲಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.