ಬಿಜೆಪಿ, ಸಂಘ ಪರಿವಾರದಲ್ಲಿ ಕಪ್ಪುಹಣ

ಭಾನುವಾರ, ಜೂಲೈ 21, 2019
26 °C

ಬಿಜೆಪಿ, ಸಂಘ ಪರಿವಾರದಲ್ಲಿ ಕಪ್ಪುಹಣ

Published:
Updated:

ಬೆಂಗಳೂರು: `ಬಿಜೆಪಿ ಮತ್ತು ಸಂಘ ಪರಿವಾರದವರು ಕಪ್ಪುಹಣದ ಧಣಿಗಳಾಗಿದ್ದು, ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಹೋರಾಟ ನಡೆಸುವ ಯಾವುದೇ ನೈತಿಕ ಹಕ್ಕು ಅವರಿಗೆ ಇಲ್ಲ~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌ಸೋಮವಾರ  ಟೀಕಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಜೆಪಿ ಹಾಗೂ ಸಂಘ ಪರಿವಾರದ ಬಳಿಯೇ ದೊಡ್ಡ ಪ್ರಮಾಣದ ಕಪ್ಪುಹಣ ಇದೆ. ಈ ಸಂಸ್ಥೆಗಳು ಗುರುದಕ್ಷಿಣೆ ಹೆಸರಿನಲ್ಲಿ ದೇಣಿಗೆ ಪಡೆದು ಸಂಪಾದಿಸಿರುವ ಅಕ್ರಮ ಆಸ್ತಿಗಳ ವಿವರವನ್ನು ಬಹಿರಂಗಪಡಿಸಲಿ~ ಎಂದು ಸವಾಲು ಹಾಕಿದರು. ಸಂಸದ ಅನಂತಕುಮಾರ್ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸುವುದಾಗಿ ಹೇಳಿದ್ದಾರೆ.ಆದರೆ `ಹುಡ್ಕೋ~ದಲ್ಲಿ ನಡೆದ ರೂ 13ಸಾವಿರ ಕೋಟಿಗಳ ಹಗರಣದಲ್ಲಿ ಅವರ ವಿರುದ್ಧ ಇರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲು ಅವರು ಆರೋಪಮುಕ್ತರಾಗಲಿ. ನಂತರ ಚಳವಳಿ ನಡೆಸುವ ಬಗ್ಗೆ ಯೋಚಿಸಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry