ಬಿಜೆಪಿ ಸರ್ಕಾರದಲ್ಲಿ ಶಾಸಕರಿಗಾಗಿ 102 ಕೋಟಿ ಖರ್ಚು!

7

ಬಿಜೆಪಿ ಸರ್ಕಾರದಲ್ಲಿ ಶಾಸಕರಿಗಾಗಿ 102 ಕೋಟಿ ಖರ್ಚು!

Published:
Updated:

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಶಾಸಕರ ವಿದೇಶಿ ಹಾಗೂ ಸ್ವದೇಶಿ ಪ್ರವಾಸ, ಸಚಿವರ ವಿವಿಧ ಸೌಲಭ್ಯಗಳಿಗಾಗಿ 102,59,99,643 ರೂಪಾಯಿ ಖರ್ಚು ಮಾಡಿದೆ.ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯಿಂದ ಸರ್ಕಾರ ಮಾಡಿರುವ ಖರ್ಚಿನ ವಿವರ ತಿಳಿದುಬಂದಿದೆ.ಶಾಸಕರ ವಿದೇಶಿ ಹಾಗೂ ಸ್ವದೇಶಿ ಅಧ್ಯನ ಪ್ರವಾಸಕ್ಕಾಗಿ 20,54, 47,037 ರೂ., ವಿಮಾನಗಳ ಮೂಲಕ ಸಚಿವರ ಪ್ರವಾಸಕ್ಕೆ 43,16,11,534 ರೂ., ಸಚಿವರ ಪ್ರಯಾಣ ಭತ್ಯೆಗಾಗಿ 9,05,26,429 ರೂ., ಹೊಸ ಕಾರುಗಳ ಖರೀದಿಗೆ 7,62,02,429 ರೂ., ಹಳೇ ಕಾರುಗಳ ರಿಪೇರಿಗೆ 2,66,68,798 ರೂ., ಸಚಿವರ ವೇತನ ಹಾಗೂ ಭತ್ಯೆಗಳಿಗೆ 6,95,59,785 ರೂ., ಸಚಿವರ ಮನೆಗಳ ನವೀಕರಣಕ್ಕಾಗಿ 3,06,28,456 ರೂ., ಸಚಿವರು ಉಪಯೋಗಿಸುವ ದೂರವಾಣಿ ವೆಚ್ಚ 96,66,871 ರೂ., ವಿವಿಧ ನಿಗಮ ಮಂಡಳಿ ಅಧ್ಯಕ್ಷರ ವೇತನ ಮತ್ತು ಭತ್ಯೆಗಳಿಗಾಗಿ 8,56,88,254 ರೂ. ಖರ್ಚು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry