ಶುಕ್ರವಾರ, ಮೇ 14, 2021
31 °C

ಬಿಜೆಪಿ ಸರ್ಕಾರದಿಂದ ತಾಂಡಾ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ರಾಜ್ಯದಲ್ಲಿ ಈ ಹಿಂದೆ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಮಾಡದ ತಾಂಡಾ ಅಭಿವೃದ್ಧಿಯನ್ನು ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಶಾಸಕ ವಾಲ್ಮೀಕ ನಾಯಕ ಹೇಳಿದರು.ತಾಲ್ಲೂಕಿನ ಬೆಳಗೇರಾದ ಹೀರಾಮಣಿ ತಾಂಡಾದಲ್ಲಿ ಈಚೆಗೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಮಗದ ರೂ,9.90 ಲಕ್ಷ ಅನುದಾನ ಸೇವಾಲಾಲ್ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಂಜಾರಾ ಜನರ ಕಷ್ಟ, ನೋವು ಅರಿತ ಸರ್ಕಾರ ಪ್ರತ್ಯೇಕವಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಬಂಜಾರಾ ಜನರ ಸರ್ವಾಂಗಿಣ ಪ್ರಗತಿಗೆ ನೆರವು ನೀಡುತ್ತಿದೆ ಎಂದು ಹೇಳಿದರು.ತಾಂಡಾಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರು ನಿಗಾ ಇಡಬೇಕು. ಕಳಪೆ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಿ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು. ನಾನು ಸದಾ ನಿಮ್ಮಂದಿಗಿರುವೆ. ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆ ಮಾಡುವೆ.ನಿಮ್ಮ ಆಶೀರ್ವಾದ ಮಾತ್ರ ಬೇಕು ಎಂದು ಜನರಿಗೆ ಮನವಿ ಮಾಡಿದರು.ತಾಂಡಾದಲ್ಲಿ ಸಿಮೆಂಟ್ ರಸ್ತೆಯಿಲ್ಲ. ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿಲ್ಲ ಇದರಿಂದ ಬಹಳ ತೊಂದರೆಯಾಗುತ್ತಿದೆ. ಈ ಹಿಂದಿನ ಮೂವರು ಶಾಸಕರಿಗೆ ಹೇಳಿದರೂ ಅವರು ಸಮಸ್ಯೆ ಅರಿತು ಕೆಲಸ ಮಾಡಿಸಿಲ್ಲ. ನೀವಾದರೂ ತಾಂಡಾದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಾಂಡಾ ಜನರು ಮನವಿ ಮಾಡಿದರು.ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಮ್ಮೆನೋರ್, ಮುಖಂಡರಾದ ಸಿದ್ಧಣ್ಣ ಕಲ್ಲಶೆಟ್ಟಿ, ವಿಷ್ಣು ಜಿತುರೆ, ಚಂದ್ರು ಕಾಳಗಿ, ವಕ್ತಾರ ಚಂದ್ರಶೇಖರ ಕಡೆಸೂರ, ಟೋಪುಸಿಂಗ್, ಯಾಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಘನಾಥ ಚವ್ಹಾಣ್, ಸಹಾಯಕ ಅಭಿಯಂತರ ಜಾಫರ್ ಅಹ್ಮದ್, ಎಲ್.ಜೆ. ಪಾಟೀಲ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.