ಮಂಗಳವಾರ, ಮೇ 11, 2021
26 °C

ಬಿಜೆಪಿ ಸರ್ಕಾರದಿಂದ ಹೆಚ್ಚಿನ ಅನುದಾನ: ರಾಜೇಂದ್ರ ವರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ರಾಜ್ಯದಲ್ಲಿ ಪ್ರತಿವರ್ಷ 60 ಮಂದಿಗೆ ಚರ್ಮೋತ್ಪನ್ನ ತಯಾರಿಕೆಯ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಜತೆಗೆ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ~ ಎಂದು ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ ತಿಳಿಸಿದರು.ಜಿಲ್ಲೆಯಲ್ಲಿ ನಿಗಮದ ಕಾರ್ಯವೈಖರಿಯನ್ನು ಪರಿಶೀಲಿಸಲು ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.`ಹಿಂದೆ ನಿಗಮ ಮತ್ತು ಕುಶಲಕರ್ಮಿಗಳ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಬಳಿಕ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಕುಶಲಕರ್ಮಿಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಈ ಸರ್ಕಾರ ನಿಗಮಕ್ಕೆ ಈವರೆಗೆ 15 ಕೋಟಿ ರೂಪಾಯಿ ಅನುದಾನ ನೀಡಿದ್ದು, ಡಿ.ವಿ. ಸದಾನಂಗೌಡ ಮುಖ್ಯಮಂತ್ರಿ ಆದಮೇಲೂ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ರಾಜೇಂದ್ರ ವರ್ಮಾ ತಿಳಿಸಿದರು.ನಷ್ಟ ಅನುಭವಿಸುತ್ತಿದ್ದ ನಿಗಮ ನಾನು ಅಧ್ಯಕ್ಷನಾಗಿ ಬಂದ ಮೇಲೆ 22ಲಕ್ಷ ರೂಪಾಯಿ ಲಾಭ ದಾಖಲಿಸುತ್ತಿದೆ. ಆದರೆ ಈ ಹಣ ಸಿಬ್ಬಂದಿಯ ವೇತನ ಹಾಗೂ ಕಟ್ಟಡಗಳ ಬಾಡಿಗೆಗೆ ಸರಿಹೊಂದುತ್ತಿದೆ. ಆದಾಯ ಹೆಚ್ಚಿಸಿಕೊಂಡು ಕುಶಲಕರ್ಮಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇನ್ನೂ ಕೆಲವು ಯೋಜನೆಗಳನ್ನು ರೂಪಿಸಬೇಕಾಗಿದೆ.2012-13ನೇ ಸಾಲಿಗೆ ಇನ್ನೂ ಹತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದೆ  `ಸ್ಪೋರ್ಟ್ಸ್ ಶೂ~ ತಯಾರಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೇವೆ, ಯೋಜನೆ ಯಶಸ್ವಿಯಾದರೆ ಖರೀದಿದಾರರಿಗೆ ಬೇಕಾದಂಥ ಬೂಟುಗಳನ್ನು ತಯಾರಿಸಿ ನೀಡಬಹುದು~ ಎಂದರು.ಲಿಡ್ಕರ್‌ನ ಹಾಸನ ಘಟಕಕ್ಕೆ ವಾರ್ಷಿಕ 15ಲಕ್ಷ ರೂಪಾಯಿ ವಹಿವಾಟು ದಾಖಲಿಸುವ ಗುರಿ ನೀಡಿದ್ದೆವು. ಎಷ್ಟು ಸಾಧನೆಯಾಗಿದೆ ಎಂಬುದು ವರ್ಷಾಂತ್ಯದಲ್ಲಿ ತಿಳಿಯಬೇಕಾಗಿದೆ. ಈಗ ಎಲ್ಲ ಜಿಲ್ಲೆಗಳಿಗೂ ಹೋಗಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಈಗಾಗಲೇ ಕೆಲವು ಜಿಲ್ಲೆಗಳ ಪ್ರವಾಸ ಮುಗಿದಿದೆ.ದಸರಾ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಲಾಗುವುದು~ ಎಂದು ರಾಜೇಂದ್ರ ವರ್ಮಾ ತಿಳಿಸಿದರು.ಬಿಜೆಪಿ ಎಸ್‌ಸಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಡಾ. ನಾರಾಯಣಸ್ವಾಮಿ, ಉಪಾಧ್ಯಕ್ಷ ಪಾಪಣ್ಣ, ಕಾರ್ಯದರ್ಶಿ ಎಸ್.ಕೆ. ಭಾಸ್ಕರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.