ಬಿಜೆಪಿ ಸರ್ಕಾರ ವಜಾಗೊಳಿಸಲು ಆಗ್ರಹ

7

ಬಿಜೆಪಿ ಸರ್ಕಾರ ವಜಾಗೊಳಿಸಲು ಆಗ್ರಹ

Published:
Updated:

ಸಿಂದಗಿ: ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೂವರು ಶಾಸಕರನ್ನು ಅನರ್ಹಗೊಳಿಸಬೇಕು ಅಲ್ಲದೇ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.  ಸ್ಥಳೀಯ ಟಿಪ್ಪು ಸುಲ್ತಾನ ವೃತ್ತದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ ರಸ್ತೆ ಮಾರ್ಗ ಮಧ್ಯದಲ್ಲಿ ಕಾರ್ಯಕರ್ತರು ಅರ್ಧ ಗಂಟೆ ರಸ್ತೆ ತಡೆಯೊಂದಿಗೆ ಪ್ರತಿಭಟನಾ ಸಭೆ ನಡೆಸಿದರು.ನಂತರ ಡಾ.ಅಂಬೇಡ್ಕರ್ ವೃತ್ತದ ಮುಖಾಂತರ ನೇರವಾಗಿ ತಹಶೀಲ್ದಾರ ಕಚೇರಿ ತಲುಪಿ ಅಲ್ಲಿ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರಪ್ಪ ಯಂಕಂಚಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಂದೂರಾಯಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲು ಗತ್ತರಗಿ, ಕಾಂಗ್ರೆಸ್ ಧುರೀಣರಾದ ಮುರಗೆಪ್ಪ ರದ್ದೇವಾಡಗಿ, ಎನ್.ಎಸ್. ಹಿರೇಮಠ, ವಿಠ್ಠಲ ಕೊಳೂರ, ತಾಪಂ ಸದಸ್ಯ ಹಳ್ಳೆಣ್ಣ ಚೌಧರಿ, ಡಿಸಿಸಿ ಸದಸ್ಯ ಶರಣಪ್ಪ ವಾರದ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಚ್. ಬಿರಾದಾರ, ಶಿವು ಹತ್ತಿ, ಶಿವು ಮೂಡಗಿ, ಬಿ.ಸಿ. ಕೊಣ್ಣೂರ, ಬಿ.ಆರ್. ಯಂಟಮಾನ, ಅಯೂಬ ದೇವರಮನಿ, ಸಿದ್ದಣ್ಣ ಹಿರೇಕುರಬರ, ಯೋಗಪ್ಪಗೌಡ ಪಾಟೀಲ, ಕೆ.ಡಿ. ಪೂಜಾರಿ, ಮಲ್ಲನಗೌಡ ಬಿರಾದಾರ ಅವರು ಮಾತನಾಡಿ, ಸಚಿವರು ಬ್ಲೂ ಫಿಲಂ ವೀಕ್ಷಣೆ ಮಾಡಿರುವುದು ಇಡೀ ರಾಜ್ಯಕ್ಕೆ ಮಾಡಿದ ಅಪಚಾರವಾಗಿದೆ ಎಂದು ಟೀಕಿಸಿದರು.

 

ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು, ಕೂಡಲೇ ಈ ಮೂವರ ವಿಧಾನಸಭೆ ಸದಸ್ಯತ್ವ ಅನರ್ಹಗೊಳಿಸಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.ಸರ್ಕಾರ ವಜಾಗೊಳ್ಳುವವರೆಗೂ ಕಾಂಗ್ರೆಸ್ ನಿರಂತರ ಹೋರಾಟ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆ ನೇತೃತ್ವವನ್ನು ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಲಕ್ಷ್ಮೀಕಾಂತ ಸೂಡಿ, ಗೊಲ್ಲಾಳಪ್ಪ ಬಂಕಲಗಿ, ಮುನ್ನಾ ಭೈರಾಮಡಗಿ, ಕಾಶೀನಾಥ ಲೋಣಿ, ಶಫಿ ಬಿಜಾಪೂರ, ಭೀಮರಾಯ ಅಮರಗೋಳ ಮುಂತಾದವರು ವಹಿಸಿಕೊಂಡಿದ್ದರು.ಇಂಡಿ ಉಪವಿಭಾಗಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲು ಗತ್ತರಗಿ ಮನವಿ ಪತ್ರ ಸಲ್ಲಿಸಿದರು.ಡಿಎಸ್‌ಎಸ್ ಪ್ರತಿಭಟನೆ

ವಿಜಾಪುರ: ವಿಧಾನ ಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ, ಕೃಷ್ಣ ಪಾಲೇಮಾರ್ ಅವರ ಶಾಸಕತ್ವ ರದ್ದು ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದವರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಈ ಶಾಸಕರ ಸದಸ್ಯತ್ವ ರದ್ದು ಪಡಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಅಶೋಕ ಚಲವಾದಿ ಆಗ್ರಹಿಸಿದರು.ಜಿಲ್ಲಾ ಸಂ.ಸಂಚಾಲಕ ವಿನಾಯಕ ಗುಣಸಾಗರ, ಸುರೇಶ ಆಸಂಗಿ, ಬಸವರಾಜ ಹೊರ್ತಿ, ಸಿದ್ಧಾರ್ಥ ಮಲಕನವರ ಮಾತನಾಡಿದರು.ವೈ.ಸಿ. ಮಯೂರ, ವಿಜು ಕಾಂಬಳೆ, ಪ್ರಶಾಂತ ತೊರವಿ, ಬಸವರಾಜ ಮುಂಬೈ, ಅರುಣ ಗವಾರಿ, ನಾಗೇಶ ಹಡಲಗೇರಿ, ರಾಜು ಪಿರಂಗಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry