ಬುಧವಾರ, ಜೂನ್ 16, 2021
23 °C
ಆಯಾರಾಂ ಗಯಾರಾಂ

ಬಿಜೆಪಿ ಸೇರಿದ ಎನ್‌.ಕೆ.ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸ್ತುತ ಇರುವ ನಿರಾಶಾದಾಯಕ ಪರಿಸ್ಥಿತಿಯನ್ನು ಭರವಸೆದಾಯಕಗೊಳಿಸಲು ಬಿಜೆಪಿಯೇ ಸೂಕ್ತ ಎಂದು ಹೇಳಿರುವ ರಾಜ್ಯಸಭಾ ಸದಸ್ಯ ಎನ್‌.ಕೆ. ಸಿಂಗ್‌ ಶನಿವಾರ ಬಿಜೆಪಿ ಸೇರಿದರು.ರಾಜ್ಯಸಭೆಗೆ ಮರು ನಾಮಕರಣ ಮಾಡಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನಿರಾಕರಿಸಿದ್ದರಿಂದ ಸಿಂಗ್‌ ಅವರು ಜೆಡಿಯು ತೊರೆದರು ಎಂದು ಹೇಳಲಾಗಿದೆ. ಶುಕ್ರವಾರ ಅವರು ಜೆಡಿಯುಗೆ ರಾಜೀನಾಮೆ ನೀಡಿದ್ದರು.

ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ವಿಶ್ವಾಸಾರ್ಹ ನಾಯಕತ್ವ ಹೊಂದಿರುವ ಬಿಜೆಪಿ ಮಾತ್ರ ದೇಶಕ್ಕೆ ಸ್ಥಿರ ಸರ್ಕಾರ ನೀಡಬಲ್ಲುದು ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.