ಬಿಜೆಪಿ ಹೋಳಾದಲ್ಲಿ ಭಾರಿ ಹೊಡೆತ: ಜಿ.ಎಂ. ಸಿದ್ದೇಶ್ವರ

7

ಬಿಜೆಪಿ ಹೋಳಾದಲ್ಲಿ ಭಾರಿ ಹೊಡೆತ: ಜಿ.ಎಂ. ಸಿದ್ದೇಶ್ವರ

Published:
Updated:
ಬಿಜೆಪಿ ಹೋಳಾದಲ್ಲಿ ಭಾರಿ ಹೊಡೆತ: ಜಿ.ಎಂ. ಸಿದ್ದೇಶ್ವರ

ಮಲೇಬೆನ್ನೂರು (ದಾವಣಗೆರೆ ಜಿಲ್ಲೆ): ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಳಲುತ್ತಿರುವ ಬಿಜೆಪಿ ಒಡೆದು ಹೋಳಾದಲ್ಲಿ ರಾಜ್ಯ ರಾಜಕಾರಣಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯ ಪಟ್ಟಿದ್ದಾರೆ.ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಬುಧವಾರ ರಾಜೀವ್‌ಗಾಂಧಿ ಸಬ್‌ಮಿಷನ್ ಕುಡಿಯುವ ನೀರು ಯೋಜನೆಗೆ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಬಿಜೆಪಿ ಹೋಳಾದಲ್ಲಿ ಮುಖ್ಯವಾಗಿ ಜಿಲ್ಲೆಯ ಏಳು ಶಾಸಕರ ಮೇಲೆ ಪರಿಣಾಮ ಬೀರಲಿದೆ.

 

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ದಾವಣಗೆರೆ ಕ್ಷೇತ್ರದ ಜನರು ಬಿಜೆಪಿ ಎಂದು ಪರಿಗಣಿಸಿ ನಮ್ಮನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಇಂತಹ ಸಮಯದಲ್ಲಿ ಪಕ್ಷ ತೊರೆಯುವ ಪ್ರಶ್ನೆ ನಮ್ಮ ಮುಂದೆ ಇಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.ಸಿದ್ದೇಶ್ವರ ಅವರ ಮಾರ್ಗದರ್ಶನದಲ್ಲಿಯೇ ನಡೆಯುವುದಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಿ.ಪಿ. ಹರೀಶ್ ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry