ಬಿಟಿಪಿಎಸ್: ವಿದ್ಯುತ್ ಉತ್ಪಾದನೆ ನಿರಾತಂಕ

7

ಬಿಟಿಪಿಎಸ್: ವಿದ್ಯುತ್ ಉತ್ಪಾದನೆ ನಿರಾತಂಕ

Published:
Updated:

ಬಳ್ಳಾರಿ:  ತಾಲ್ಲೂಕಿನ ಕುಡುತಿನಿ ಗ್ರಾಮದ ಬಳಿಯಿರುವ ಬಳ್ಳಾರಿ ಶಾಖೋತ್ಪನ್ನ ಘಟಕ (ಬಿಟಿಪಿಎಸ್)ದಲ್ಲಿ ನಿತ್ಯವೂ ಅಂದಾಜು 400 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ನಾಗಪುರದ ಬಳಿಯ ಗಣಿಯಿಂದ ನಿತ್ಯವೂ ಒಂದು ಅಥವಾ ಎರಡು ಸರಕು ಸಾಗಣೆ ರೈಲುಗಳ ಮೂಲಕ ಅಗತ್ಯ ಕಲ್ಲಿದ್ದಲನ್ನು ತರಿಸಿಕೊಳ್ಳಲಾಗುತ್ತಿದೆ. ಘಟಕಕ್ಕೆ ಪ್ರತಿ ದಿನ 7200 ಟನ್ ಕಲ್ಲಿದ್ದಲಿನ ಅಗತ್ಯವಿದ್ದು, ಈಗಿರುವ ದಾಸ್ತಾನಿನಲ್ಲಿ ಇನ್ನೂ 14 ದಿನದವರೆಗೆ ಕಲ್ಲಿದ್ದಲಿನ ಕೊರತೆ ಇಲ್ಲ ಎಂದು ಬಿಟಿಪಿಎಸ್ ಕಾರ್ಯ ನಿರ್ವಾಹಕ ನಿರ್ದೇಶಕಿ ರತ್ನಮ್ಮ ತಿಳಿಸಿದ್ದಾರೆ.

ಈ ಘಟಕ 500 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ ಕಲ್ಲಿದ್ದಲಿನ ಗುಣಮಟ್ಟದ ನ್ಯೂನತೆಯಿಂದ ಉತ್ಪಾದನೆಯಲ್ಲಿ ಏರುಪೇರಾಗುತ್ತದೆ. ಹಾಗಾಗಿ ಸದ್ಯ 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಟಿಪಿಎಸ್‌ನ ದ್ವಿತೀಯ ಘಟಕದಲ್ಲಿ ಪ್ರಾಯೋಗಿಕ ವಿದ್ಯುತ್ ಉತ್ಪಾದನಾ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

700 ಮೆಗಾವಾಟ್ ಸಾಮರ್ಥ್ಯದ ಮೂರನೇ ಘಟಕದ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗುವ ಗುರಿ ಇದೆ. ರಾಜ್ಯದಲ್ಲೇ ಈ ಘಟಕ ಅಧಿಕ ವಿದ್ಯುತ್ ಉತ್ಪಾದಿಸುವ ಘಟಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry