ಬಿಟಿಪಿಎಸ್: 2ನೇ ಘಟಕ ಪ್ರಜ್ವಲನ

7

ಬಿಟಿಪಿಎಸ್: 2ನೇ ಘಟಕ ಪ್ರಜ್ವಲನ

Published:
Updated:

ಬಳ್ಳಾರಿ: ತಾಲ್ಲೂಕಿನ ಕುಡುತಿನಿ ಬಳಿಯಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಬಿಟಿಪಿಎಸ್) 500 ಮೆಗಾವಾಟ್ ಸಾಮರ್ಥ್ಯದ 2ನೇ ಘಟಕದ ಬಾಯ್ಲರ್  ಪ್ರಜ್ವಲಗೊಳಿಸುವಿಕೆ (ಲೈಟಪ್) ಪ್ರಾಯೋಗಿಕ ಕಾರ್ಯವನ್ನು ಶುಕ್ರವಾರ ಯಶಸ್ವಿಯಾಗಿ  ನೆರವೇರಿಸ ಲಾಯಿತು.ಈ ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಉಳಿದ ಕಾಮಗಾರಿಗಳಾದ ಟರ್ಬೈನ್ ಜನರೇಟರ್, ಓ.ಡಿ.ವೈ ಮತ್ತಿತರ ವಿದ್ಯುತ್, ಯಾಂತ್ರಿಕ ಉಪಕರಣಗಳ ಜೋಡಣೆ ಮತ್ತು ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಪ್ರಸಕ್ತ ಆಗಸ್ಟ್ ವೇಳೆಗೆ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.ದ್ವಿತೀಯ ಘಟಕದಲ್ಲಿ ಮೊದಲ ಬಾರಿಗೆ ಬಾಯ್ಲರ್ ಪ್ರಜ್ವಲಗೊಳಿಸುವ ಸಂದರ್ಭ ಕಾರ್ಯನಿರ್ವಾಹಕ ನಿರ್ದೇಶಕಿ ಜಿ. ರತ್ನಮ್ಮ, ಬಿಎಚ್‌ಇಎಲ್  ಸಹಾಯಕ ವ್ಯವಸ್ಥಾಪಕ ಎಂ. ಕಾಳಿಕೇಶ್ವರಯ್ಯ, ಮುಖ್ಯ ಎಂಜಿನಿಯರ್ ಸಿ. ವೇಣುಗೋಪಾಲ, ನರೆಂದ್ರಕುಮಾರ, ಟಿ.ವಿ. ರಂಗನಾಥ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry