ಬಿ.ಟಿ ಹತ್ತಿ ಆಮದು: ಶೀಘ್ರ ವರದಿ

7

ಬಿ.ಟಿ ಹತ್ತಿ ಆಮದು: ಶೀಘ್ರ ವರದಿ

Published:
Updated:

ನವದೆಹಲಿ(ಪಿಟಿಐ): ಗ್ರಾಹಕರಿಂದ ಯಾವುದೇ ವಿರೋಧ ಇಲ್ಲದಿದ್ದರೂ, ಕೆಲವು ದೇಶಗಳು ಬಿ.ಟಿ ಹತ್ತಿ ಆಮದು ಮೇಲೆ ನಿರ್ಬಂಧ ಹೇರುತ್ತಿವೆ ಎಂದು ಹತ್ತಿ ಉತ್ಪಾದನೆಯಲ್ಲಿ ಜೈವಿಕ ತಂತ್ರಜ್ಞಾನ ಬಳಕೆ ಕುರಿತು ಅಧ್ಯಯನ ನಡೆಸುತ್ತಿರುವ ಅಮೆರಿಕ ಮೂಲದ  ಸಂಸ್ಥೆಯೊಂದು ಹೇಳಿದೆ.ಈ ಸಂಸ್ಥೆಯಲ್ಲಿ 9 ದೇಶಗಳ ತಜ್ಞರಿದ್ದು, ಈ ಮಾಸಾಂತ್ಯಕ್ಕೆ ನಡೆಯ­ಲಿರುವ 72ನೇ ಅಂತರರಾಷ್ಟ್ರೀಯ ಹತ್ತಿ ಸಲಹಾ ಸಮಿತಿ(ಐಸಿಎಸಿ) ಸಭೆಯಲ್ಲಿ ಈ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.1996ರಿಂದ ಬಿ.ಟಿ ಹತ್ತಿ ವಾಣಿಜ್ಯ ಬಳಕೆಗೆ ಅವಕಾಶ ನೀಡಲಾಗಿದೆ. ಇದು­ವರೆಗೆ ಗ್ರಾಹಕರು ಇದನ್ನು ತಿರಸ್ಕರಿ­ಸಿರುವ ಕುರಿತು ಯಾವುದೇ ಸಾಕ್ಷ್ಯ ಆಧಾರ ಇಲ್ಲ. ಹಾಗಿದ್ದರೂ ಕೆಲವು ದೇಶಗಳು ಇದರ ಆಮದು ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ ಎಂದು ಈ ಸಂಸ್ಥೆ ಆರೋಪಿಸಿದೆ.ಪ್ರಸಕ್ತ ಸಾಲಿನಲ್ಲಿ ಜಾಗತಿಕ ಹತ್ತಿ ಉತ್ಪಾದನೆ 255 ಲಕ್ಷ ಟನ್‌ಗಳಷ್ಟಾ­ಗುವ ನಿರೀಕ್ಷೆ ಇದೆ. 237 ಲಕ್ಷ ಟನ್‌ಗಳಷ್ಟು ಬೇಡಿಕೆ ಅಂದಾಜು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry