ಬಿಡ್‌ ಸಲ್ಲಿಸಿದ ಭಾರತ

7
ಹಾಕಿ ವಿಶ್ವಕಪ್‌

ಬಿಡ್‌ ಸಲ್ಲಿಸಿದ ಭಾರತ

Published:
Updated:

ಲೂಸಾನ್‌ (ಐಎಎನ್‌ಎಸ್‌): ಭಾರತ ಸೇರಿದಂತೆ ಇತರ ಐದು ರಾಷ್ಟ್ರಗಳು 2018ರ ಹಾಕಿ ವಿಶ್ವಕಪ್‌ಗೆ ಬಿಡ್‌ ಸಲ್ಲಿಸಿವೆ.

‘2018ರ ವಿಶ್ವಕಪ್‌ಗೆ ಒಟ್ಟು ಐದು ರಾಷ್ಟ್ರಗಳಿಂದ ಏಳು ಬಿಡ್‌ ಸ್ವೀಕರಿಸಿದ್ದೇವೆ. ಎಲ್ಲಾ ದೇಶಗಳು ವಿಶ್ವಕಪ್‌ ಆಯೋಜಿಸಲು ಉತ್ಸು­ಕ­ವಾಗಿವೆ. ಬಿಡ್‌ ಸಲ್ಲಿ­ಸಲು ಆಗಸ್ಟ್‌ 31 ಕೊನೆಯ ದಿನ­ವಾಗಿತ್ತು’ ಎಂದು ಅಂತರ­ರಾಷ್ಟ್ರೀಯ ಹಾಕಿ ಫೆಡರೇಷನ್‌ ತಿಳಿಸಿದೆ.  ಆಸ್ಟ್ರೇಲಿಯಾ, ಇಂಗ್ಲೆಂಡ್‌, ಮಲೇಷ್ಯಾ ಮತ್ತು ನ್ಯೂಜಿಲೆಂಡ್‌ ದೇಶಗಳೂ ಬಿಡ್‌ ಸಲ್ಲಿಸಿವೆ.1982 (ಮುಂಬೈ) ಮತ್ತು 2010 (ನವದೆಹಲಿ) ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು.  ಎಲ್ಲಾ ರಾಷ್ಟ್ರಗಳ ಬಿಡ್‌ಗಳನ್ನು ಪರಿಶೀಲಿಸಿ, ಆಯಾ ದೇಶಗಳಿಗೆ ಭೇಟಿ ನೀಡಿ ನವೆಂಬರ್‌ 7ರಂದು ನಡೆಯಲಿರುವ ಎಫ್‌ಐಎಚ್‌ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಆತಿಥ್ಯ ವಹಿಸುವ ರಾಷ್ಟ್ರವನ್ನು ಅಂತಿಮಗೊಳಿಸಲಾಗುತ್ತದೆ. 2018ರಲ್ಲಿ ಪುರುಷರ ಮತ್ತು ಮಹಿಳೆಯರ ವಿಶ್ವಕಪ್‌ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry