ಶನಿವಾರ, ಮೇ 28, 2022
27 °C

ಬಿತ್ತನೆಗೆ ಹದಗೊಂಡ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಮಳೆ ಆಧಾರಿತ ಭೂಮಿ ಹೊಂದಿರುವ ರೈತರು  ಹೊಲಗಳನ್ನು ಹದಗೊಳಿಸಿ ಕೊಟ್ಟಿಗೆ ಗೊಬ್ಬರ ಬೆರೆಸಿ, ಬೀಜ ಸಂಗ್ರಹಿಸಿ ಬಿತ್ತನೆ ಮಾಡಲು ಮಳೆಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.ಹವಾಮಾನ ಇಲಾಖೆ ಈ ವರ್ಷ ಉತ್ತಮ ಮುಂಗಾರು ಮಳೆ ಬರುತ್ತದೆ ಎಂದು ಮುನ್ಸೂಚನೆ ನೀಡಿದ ಬೆನ್ನಲ್ಲೇ ಪ್ರಾರಂಭದಲ್ಲಿ ಒಂದೆರಡು ಉತ್ತಮ ಮಳೆಯಾಗಿದ್ದರಿಂದ ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಾತಾವರಣ ಬೇಸಿಗೆಯ ಬಿಸಿಲಿನಿಂದ ಕೂಡಿದ್ದು, ಸಂಜೆ ವೇಳೆಗೆ ದಟ್ಟವಾದ ಕಾರ್ಮೋಡಗಳು ಆಕಾಶವನ್ನು ಆವರಿಸಿ ಮಳೆ ಬರುವ ವಾತಾವರಣ ನಿರ್ಮಾಣಗೊಂಡು ರೈತರ ಸಂತೋಷಕ್ಕೆ ಕಾರಣವಾಗುತ್ತದೆ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಬೀಸುವ ಭಾರಿ ಬಿರುಗಾಳಿಯಿಂದ ಮೋಡ ಚದುರಿ ಮಳೆ ಬಾರದೇ ನಿರಾಸೆ ಮೂಡಿಸುತ್ತದೆ.ಕಳೆದ ವರ್ಷ ಅನುಭವಿಸಿದ ಬೆಳೆ ನಷ್ಟದಿಂದ ಬಸವಳಿದಿದ್ದ ರೈತರು ಈ ವರ್ಷವಾದರೂ ಉತ್ತಮ ಮಳೆ ಬಂದೀತೆಂಬ ಆಶಾಭಾವನೆಯಿಂದ ಆಕಾಶದತ್ತ ಮುಖ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.