ಮಂಗಳವಾರ, ಅಕ್ಟೋಬರ್ 15, 2019
29 °C

ಬಿನ್ ಲಾಡೆನ್ ವಿರುದ್ಧ ಕಾರ್ಯಾಚರಣೆ: ಮಾಹಿತಿ ಸೋರಿಕೆ: ತನಿಖೆ ಆರಂಭ

Published:
Updated:

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿ  ಅಲ್ ಖೈದಾ  ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ವಿರುದ್ಧ ನಡೆದಿದ್ದ ಸೇನಾ ಕಾರ್ಯಾಚರಣೆಯ ರಹಸ್ಯ ಮಾಹಿತಿಗಳನ್ನು ಹಾಲಿವುಡ್‌ನ ಚಿತ್ರ ತಯಾರಕರಿಗೆ ನೀಡಲಾಗಿದೆಯೇ ಎಂಬುದರ ಬಗ್ಗೆ ತನಿಖೆ ಆರಂಭಗೊಂಡಿದೆ ಎಂದು  ರಿಪಬ್ಲಿಕನ್ ಪಕ್ಷದ ಪ್ರಮುಖ ಸದಸ್ಯ ಪೀಟರ್‌ಕಿಂಗ್ ಹೇಳಿದ್ದಾರೆ.ಆಂತರಿಕ ಭದ್ರತಾ ಸಮಿತಿಯ ಮುಖ್ಯಸ್ಥರೂ ಆಗಿರುವ ಪೀಟರ್ ಕಿಂಗ್, ಅಮೆರಿಕ ರಕ್ಷಣಾ ಇಲಾಖೆಗೆ ಪತ್ರ ಬರೆದು,  ಲಾಡೆನ್ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಒಬಾಮ ಆಡಳಿತವು ಸೋನಿ ಪಿಕ್ಚರ್ಸ್‌ ಹಾಗೂ ಚಿತ್ರ ತಯಾರಕರಾದ ಕ್ಯಾತ್ರಿನ್ ಬಿಗೆಲೊ ಅವರಿಗೆ ನೀಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

Post Comments (+)