ಬಿಪಾಶಾಗೆ ಟೈಮ್ ಇಲ್ವಂತೆ!

7

ಬಿಪಾಶಾಗೆ ಟೈಮ್ ಇಲ್ವಂತೆ!

Published:
Updated:
ಬಿಪಾಶಾಗೆ ಟೈಮ್ ಇಲ್ವಂತೆ!

ಬಿಪಾಶಾ ಬಸು, ಕೃಷ್ಣ ಸುಂದರಿ, ಕೆಂಪು ನೀಲಿ ಬಣ್ಣದ ಲೆಹೆಂಗಾ ಚೋಲಿಯಲ್ಲಿ ಮಿಂಚುತ್ತಿದ್ದರು. ವಧುವಿನ ಉಡುಗೆಯಲ್ಲಿದ್ದ ಬಿಪಾಶಾಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಯಿತು.ನನಗಿನ್ನೂ ಸರಿಯಾದ ಹುಡುಗ ಸಿಕ್ಕಿಲ್ಲ. ಹುಡುಕಲು ಸಮಯವಿಲ್ಲ ಎಂದು ಹೇಳಿ ತಮ್ಮ ಗುಳಿಕೆನ್ನೆಯಗಲಕ್ಕೆ ನಕ್ಕರಂತೆ.ಮದುವೆಯಾಗುವುದೇ ಇಲ್ಲವೇ ಎಂಬ ಪ್ರಶ್ನೆ ಎದುರಾದಾಗ ಬೆರಳು ತೋರಿದ್ದು ಮಾಧವನ್ ಕಡೆಗೆ!ಉಫ್! ಅಲ್ಲಿಗೆ ಎಲ್ಲರೂ ಬೇಸ್ತು..! ಮಾಧವನ್‌ಗೆ ಮದುವೆಯಾಗ್ತಾರಾ? ಈಚೆಗಷ್ಟೇ ಜಾನ್ ಅಬ್ರಹಾಂನೊಂದಿಗೆ ಇದ್ದ 8 ವರ್ಷಗಳ ಸುದೀರ್ಘ ಬಾಂಧವ್ಯವನ್ನು ಕಳಚಿಕೊಂಡಿರುವ ಬಿಪಾಶಾಳಿಗೆ ರಾಣಾ ಸಹ ಮದುವೆ ಪ್ರಸ್ತಾಪ ತಿರಸ್ಕರಿಸಿದ.ಈಗ ಮಾಧವನ್ ಕಡೆಗೆ ಬೆರಳು ತೋರಿದ್ದು... ಎಲ್ಲರ ಹಣೆಗಂಟಿಕ್ಕಿ, ಹುಬ್ಬೇರಿದ್ದವು.

ಆಗ ಬಿಪಾಶಾ ಬಾಯ್ಬಿಟ್ಟರು. ತಮಗೆ ಹುಡುಗನನ್ನು ಹುಡುಕಲು ಸಮಯವಿಲ್ಲ. ಆದರೆ ಮಾಧವನ್ ತಮ್ಮ ಕನಸಿನ ಹುಡುಗನನ್ನು ಹುಡುಕಲು ಸಹಾಯ ಮಾಡುವ ವಿಶ್ವಾಸ ನೀಡಿದ್ದಾರೆ.ಜೋಡಿ ಬ್ರೇಕರ್ ಸಿನಿಮಾದಲ್ಲಿ ಬಿಪ್ಸ್‌ಗೆ ಜೋಡಿಯಾಗಿರುವ ಮ್ಯಾಡಿ ಹೆಗಲಿಗೆ ಈಗ ಜೋಡಿ ಮೇಕರ್ ಆಗುವ ಜವಾಬ್ದಾರಿ ಇದೆ ಎಂದೂ ಬಿಪಾಶಾ ವಿವರಿಸಿದರು.

 ಹುಡುಗ ಸಿಗಲಿ. ಆಮೇಲೆ ಮದುವೆಯಾಗುವೆ. ಮದುವೆಗೆ ಮುನ್ನ ಎಲ್ಲರಿಗೂ ತಿಳಿಸುವೆ ಎಂದು ಹೇಳುವುದು ಮರೆಯಲಿಲ್ಲ!

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry