ಬುಧವಾರ, ಏಪ್ರಿಲ್ 21, 2021
29 °C

ಬಿಪಾಶಾ-ನವಾಜ್ ಆತ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತೀಂದ್ರಿಯ ಶಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿರುವ ಚಿತ್ರ `ಆತ್ಮ~. ಈ ಸೂಪರ್‌ನ್ಯಾಚುರಲ್ ಥ್ರಿಲ್ಲರ್ ಸಿನಿಮಾದಲ್ಲಿ ಬಿಪಾಶಾ ಬಸು ಮತ್ತು ನವಾಜುದ್ದೀನ್ ಸಿದ್ದಿಕಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, `ಆತ್ಮ~ವನ್ನು ನಿರ್ದೇಶಿಸುತ್ತಿರುವುದು ಸುಪರ್ಣ್ ವರ್ಮಾ.ಮೊದಲ ಬಾರಿಗೆ ನವಾಜುದ್ದೀನ್ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಕಹಾನಿ~, `ಪಾನ್ ಸಿಂಗ್ ತೋಮರ್~ ಹಾಗೂ `ಗ್ಯಾಂಗ್ಸ್ ಆಫ್ ವಾಸೇಪುರ್~ ಚಿತ್ರದಲ್ಲಿ ಇವರ ನಟನೆಗೆ ಸಿಕ್ಕ ಅಭೂತಪೂರ್ವ ಮೆಚ್ಚುಗೆಯೇ `ಆತ್ಮ~ ಚಿತ್ರದಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ದಕ್ಕಿಸಿಕೊಟ್ಟಿದೆಯಂತೆ.ವರ್ಮಾ, ನವಾಜುದ್ದೀನ್ ಅವರನ್ನು ಅದ್ಭುತ ನಟ ಎಂದು ಕರೆದಿದ್ದಾರೆ. `ಅವರನ್ನು ಮೊದಲ ಬಾರಿ ಭೇಟಿ ಆದಾಗಲೇ ಅವರದ್ದು ಆಸಕ್ತಿಕರ ವ್ಯಕ್ತಿತ್ವ ಎನ್ನಿಸಿತು. ಅದು ಭಾವುಕ ಕ್ಷಣ. ನಾನು ಆತ್ಮ ಸಿನಿಮಾದ ಕಥೆ ಹೇಳಿದಾಕ್ಷಣ ಅವರಿಗೆ ಅದು ತುಂಬಾ ಹಿಡಿಸಿತು. ಹಾಗೆಯೇ, ಬಿಪಾಶಾ ಕೂಡ ನವಾಜುದ್ದೀನ್ ಜತೆ ನಟಿಸಲು ಉತ್ಸುಕರಾಗಿದ್ದಾರೆ~ ಎನ್ನುತ್ತಾರೆ ವರ್ಮಾ.ವರ್ಮಾ ಈ ಹಿಂದೆ `ಏಕ್ ಕಿಲಾಡಿ ಏಕ್ ಹಸೀನಾ~ ಹಾಗೂ `ಆಸಿಡ್ ಫ್ಯಾಕ್ಟರಿ~ ಚಿತ್ರಗಳನ್ನು ನಿರ್ದೇಶಿಸಿದ್ದರು. `ಆತ್ಮ~ ಚಿತ್ರದಲ್ಲಿ ನವಾಜುದ್ದೀನ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಚಿತ್ರದಲ್ಲಿ ಅವರ ಪಾತ್ರ ಹೇಗೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ ಎಂಬ ಪ್ರಶ್ನೆ ಇಟ್ಟರೆ, `ಎಲ್ಲವನ್ನೂ ಈಗಲೇ ಹೇಳಿದರೆ ಕುತೂಹಲವಿರುವುದಿಲ್ಲ. ಅದನ್ನು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು.ಆದರೆ ಒಂದಂತೂ ಸತ್ಯ. ನವಾಜುದ್ದೀನ್ ಅವರ ಅಭಿಮಾನಿಗಳು ಅವರನ್ನು ಇಲ್ಲಿವರೆಗೆ ನೋಡಿರದ ಇಮೇಜ್‌ನಲ್ಲಿ ನೋಡಲಿದ್ದಾರೆ~ ಎನ್ನುತ್ತಾ ಕುತೂಹಲ ಹೆಚ್ಚಿಸುತ್ತಾರೆ ವರ್ಮಾ.

ಅಂದಹಾಗೆ, ಈ ಚಿತ್ರ ವರ್ಷಾಂತ್ಯದಲ್ಲಿ ತೆರೆಕಾಣಲಿದ್ದು ಆಗಸ್ಟ್‌ನೊಳಗೆ ಚಿತ್ರೀಕರಣ ಮುಕ್ತಾಯಗೊಳ್ಳಲಿದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.