ಮಂಗಳವಾರ, ಜೂನ್ 15, 2021
20 °C

ಬಿಪಿಎಲ್ ಇಳಿಕೆ: ಪ್ರತಿಪಕ್ಷ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯೋಜನಾ ಆಯೋಗವು ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ವಾಸಿಸುತ್ತಿರುವವರ ಸಂಖ್ಯೆಯನ್ನು ಇಳಿಸಿರುವ ಸರ್ಕಾರ ಮತ್ತು ಯೋಜನಾ ಆಯೋಗದ ಕ್ರಮವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಪ್ರತಿಪಕ್ಷಗಳು, `ಇದು ಬಡವರನ್ನು ವಂಚಿಸಲು ಮಾಡಿರುವ ಸಂಚು~ ಎಂದಿವೆ.ಸಭೆ ಆರಂಭವಾದ ತಕ್ಷಣ ಬಿಜೆಪಿ, ಬಿಜೆಡಿ, ಜೆಡಿಯು, ಬಿಎಸ್‌ಪಿ, ಎಐಎಡಿಎಂಕೆ ಹಾಗೂ ಎಡಪಕ್ಷಗಳು, ಈ ವಿಷಯದ ಮೇಲೆ ಚರ್ಚೆ ನಡೆಯಬೇಕೆಂದು ಒತ್ತಾಯಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಪೀಠದಲ್ಲಿದ್ದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಬಜೆಟ್ ಮೇಲಿನ ಚರ್ಚೆಯಲ್ಲಿ ಅಥವಾ ಪ್ರಶ್ನಾವಧಿಯಲ್ಲಿ ವಿಷಯ ಪ್ರಸ್ತಾಪಿಸಬಹುದೆಂದರು. ಈ ಮಧ್ಯೆ, ರಾಜ್ಯಸಭೆಯಲ್ಲಿನ ಬಿಜೆಪಿ ಉಪನಾಯಕ ಎಸ್.ಎಸ್. ಅಹ್ಲುವಾಲಿಯ ಸುದ್ದಿಗಾರರ ಜೊತೆ ಮಾತನಾಡಿ, ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವವರ ಸಂಖ್ಯೆಯನ್ನು  ಇಳಿಸಿ ಪಟ್ಟಿ ಮಾಡಿರುವುದನ್ನು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.