ಭಾನುವಾರ, ಮೇ 9, 2021
18 °C

`ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಅನ್ಯಾಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಅರ್ಹ ಕಡು  ಬಡವರಿಗೆ ಬಿ.ಪಿ.ಎಲ್. ರೇಶನ್ ಕಾರ್ಡ ವಿತರಿ ಸಿಲ್ಲ. ಬದಲಿಗೆ ಎ.ಪಿ.ಎಲ್. ಕಾರ್ಡ್ ವಿತರಿಸಲಾಗಿದೆ. ಶ್ರೀಮಂತರಿಗೆ ಬಿಪಿಎಲ್ ವಿತರಿಸಿ ಅರ್ಹರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿ ಸೋಮ ವಾರ ನೂರಾರು ಬಡ ಫಲಾನು ಭವಿಗಳು ತಹಶೀಲ್ದಾರ್ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದರು.ಮೊದಲು ಬಡತನದ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್. ಪಡಿತರ ಚೀಟಿ ವಿತರಿಸಲಾಗಿತ್ತು. ಅದರಂತೆ ನಮಗೆ ಅಕ್ಕಿ, ಗೋದಿ ವಿತರಿಸಲಾಗುತ್ತಿತ್ತು. ಆದರೆ ಈಚೆಗೆ ವಿತರಣೆಯಾದ ಹೊಸ ಕಾರ್ಡುಗಳಲ್ಲಿ ಬಡವರಿಗೆ ಅನ್ಯಾಯ ವಾಗಿದೆ. ಕಡು ಬವಡವರಿಗೆ ಅಕ್ಕಿ ಗೋದಿ ಸಿಗದೇ ಕಂಗಾಲಾಗಿದ್ದಾರೆ ಎಂದು ದೂರಿದರು.ದುಡ್ಡು ಕೊಟ್ಟ ಕೆಲವು ಶ್ರೀಮಂತರಿಗೆ ಬಿ.ಪಿ.ಎಲ್. ಕಾರ್ಡ ವಿತರಿಸಲಾಗಿದೆ. ಈ ಬಗ್ಗೆ ಶ್ರೀಮಂತರೇ ಊರ ತುಂಬ ಹೇಳುತ್ತ ಹೊರಟಿದ್ದಾರೆ. ನಮಗೆ ಅನ್ಯಾಯವಾದ ಬಗ್ಗೆ ಪ್ರಶ್ನಿಸಿದರೆ ಇದು ನಮಗೆ ಗೊತ್ತಿಲ್ಲ, ಕಂಪ್ಯೂಟರ್‌ನಲ್ಲಿ ದೋಷ ಇದೆ, ಹೀಗಾಗಿ ತಪ್ಪಾಗಿದೆ ಎಂಬ ನೆವ ಹೇಳುತ್ತಾರೆ.ಆದರೆ ಕಂಪ್ಯೂ ಟರ್ ಬಡವರಿಗೆ ಮಾತ್ರ ಅನ್ಯಾಯ ಮಾಡುತ್ತದೆಯೇ ? ಎಂದವರು ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಅರ್ಹ ಬಡವರಿಗೆ ಸಿಗಬೇಕಾದ ಯೋಜನೆಗಳು ಶ್ರೀಮಂತರಿಗೆ ಲಭ್ಯವಾದರೆ ಸಾಮಾ ಜಿಕ ನ್ಯಾಯ ಯಾವಾಗ ಸಿಗುತ್ತದೆ. ಈ ಕೂಡಲೇ ತಾವು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಕಣ್ಣೀರು ಹಾಕಿದ ಮಹಿಳೆ:  ಬಿ.ಪಿ.ಎಲ್. ಪಡಿತರ ಚೀಟಿ ಬಗ್ಗೆ ತಹಶೀಲ್ದಾರ್ ಎದುರು ಮನವಿ ಹೇಳುತ್ತಿರುವಾಗಲೇ ಗ್ರಾಮದ ಮಹಾಂತಮ್ಮ ಪರೂತಮಠ ಎಂಬ ಮಹಿಳೆ ಕಣ್ಣೀರು ಹಾಕುತ್ತ, ನಮ್ಮ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ, ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಎಂದು ಸಾಕಷ್ಟು ಸಲ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನೀವು ಈ ಕೂಡಲೇ ಅದನ್ನು ತಡೆಗಟ್ಟಲು ಕ್ರಮಕೈಗೊಳ್ಳಿ ಎಂದು ಕಣ್ಣೀರು ಹಾಕಿದಾಗ, ಮಹಿಳೆಯ ಕಣ್ಣೀರಿಗೆ ಕರಗಿದ ತಹಶೀಲ್ದಾರ್ ಸಿ.ಲಕ್ಷ್ಮಣ ಅವರು ಕೂಡಲೇ ಅಬಕಾರಿ ಇಲಾ ಖೆಯ ಅಬಕಾರಿ ನಿರೀಕ್ಷಕ ಎಚ್.ಎಸ್. ವಜ್ರಮಟ್ಟಿ ಅವರನ್ನು ಕರೆಯಿಸಿ ವಿವರಣೆ ಕೇಳಿದರು.ಮದ್ಯ ಮಾರಾಟದ ಬಗ್ಗೆ ಯಾರಾ ದರೂ ದೂರು ನೀಡಿದರೆ ದೂರು ದಾಖಲಿಸಿಕೊಂಡು ಕ್ರಮ ಜರುಗಿಸ ಲಾಗುವುದು ಎಂದು ಹೇಳಿದಾಗ ನಾವು ಲಿಖಿತ ದೂರು ನೀಡುತ್ತೇವೆ ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸಿದರು.ನಿಯೋಗದಲ್ಲಿ ಸಾಮಾಜಿಕ ಸೇವಾ ಕಾರ್ಯಕರ್ತ ಅಶೋಕ ನಿಡಗುಂದಿ, ಬಿ.ಸಿ.ಕರಭಂಟನಾಳ, ಮಹಾಂತಮ್ಮ ಪರೂತಮಠ, ಪ್ರವೀಣ ಕಂಪ್ಲಿ, ಯಮ ನೂರಸಾ ಪಿಂಜಾರ, ಮಹಾಂತಮ್ಮ ಹೊಳಿ ಮೊದಲಾದ ಪ್ರಮುಖರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.