ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿ ಆಹಾರಧಾನ್ಯ: ಸಂಪುಟ ಒಪ್ಪಿಗೆ

7

ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿ ಆಹಾರಧಾನ್ಯ: ಸಂಪುಟ ಒಪ್ಪಿಗೆ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದಿಂದಲೇ ಅನ್ವಯವಾಗುವಂತೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ 50 ಲಕ್ಷ ಟನ್‌ ಆಹಾರಧಾನ್ಯ ವಿತರಿಸಲು ಆರ್ಥಿಕ  ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿದೆ.ಹೆಚ್ಚುವರಿ ಆಹಾರಧಾನ್ಯ ವಿತರಣೆಯ ನಿರ್ಧಾರದಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ

ರೂ 9,471 ಕೋಟಿ ಹೊರೆ ಬೀಳಲಿದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ದೇಶದ  6.52 ಕೋಟಿ ಕುಟುಂಬ ಇದರ ಲಾಭ ಪಡೆಯಲಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್‌ ತಿವಾರಿ  ತಿಳಿಸಿದರು.ಆರ್ಥಿಕ  ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, 2014 ಮಾರ್ಚ್‌ 31ರವರೆಗೆ ಈ ನೀತಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. 

ಆರ್‌ಬಿಐಗೆ ಅನುಮತಿ:  ವಿಶ್ವಬ್ಯಾಂಕ್‌ನ ವಿಶೇಷ ಬಾಂಡ್ ಯೋಜನೆಯಲ್ಲಿ 27,950 ಕೋಟಿ ರೂಪಾಯಿ ಹೂಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕೇಂದ್ರ ಸರ್ಕಾರ ಗುರುವಾರ ಅನುಮತಿ ನೀಡಿದೆ.ಪ್ರತಿಯಾಗಿ ಭಾರತದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ  ವಿಶ್ವಬ್ಯಾಂಕ್‌  ಆರ್ಥಿಕ ನೆರವು ಮಿತಿ ರೂ 27,950 ಕೋಟಿ ಯಿಂದ

ರೂ 1,36, 500 ಕೋಟಿ ರೂಪಾಯಿಗೆ ಹೆಚ್ಚಲಿದೆ. ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸಚಿವ ಸಂಪುಟ ಈ ಒಪ್ಪಿಗೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry