ಬಿಬಿಎಂಪಿಯನ್ನು ಗುತ್ತಿಗೆಗೆ ಕೊಡಿ

7

ಬಿಬಿಎಂಪಿಯನ್ನು ಗುತ್ತಿಗೆಗೆ ಕೊಡಿ

Published:
Updated:

ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆ ಆವರಣವನ್ನು ಆಚಾರ್ಯ ಪಾಠ­ಶಾಲೆ­ಯ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ್ದರು. ಇದೀಗ ನಮ್ಮ ನೂತನ ಮೇಯರ್‌ ಮುಂದಿನ ದಿನಗಳಲ್ಲಿ ಅದೇ ಮಾರುಕಟ್ಟೆಯನ್ನು ಸ್ವಚ್ಛ­ಗೊಳಿಸಲು ವಿದ್ಯಾರ್ಥಿ­ಗಳು ಮತ್ತು ಎನ್‌ಜಿಒಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳ­ಲಿ­ದ್ದಾ­ರಂತೆ.

ನಗರವನ್ನು ಸ್ವಚ್ಛಗೊಳಿ­ಸುವು­ದಕ್ಕಾಗಿಯೇ ಬಿಬಿಎಂಪಿ ತನ್ನ ನೌಕರರನ್ನು ಮತ್ತು ಗುತ್ತಿಗೆದಾರರನ್ನು ನೇಮಿಸಿದೆ. ಅವರಿಗೆ ಸಲ್ಲುವ ಸೌಲಭ್ಯ ಮತ್ತು ವೇತನ ಕೊಟ್ಟರೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಶಿಕ್ಷಣ ಪಡೆಯಬೇಕಾದ ವಿದ್ಯಾರ್ಥಿ­ಗಳನ್ನು ದುರುಪಯೋಗ­ಪಡಿ­ಸುವುದು ಉಚಿತ­ವೇ? ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಸರಿಯಾಗಿ ನಿರ್ವಹಿಸದೆ, ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುತ್ತಾ ಜನರ ಕಣ್ಣಿಗೆ ಮಣ್ಣು ಎರಚಲಾಗುತ್ತಿದೆ.ಆಯುಕ್ತರನ್ನು, ಎಂಜಿ­ನಿಯರ್‌­ಗಳನ್ನು,‌ ಸಾವಿರಾರು ನೌಕರರನ್ನು  ಸಂಬಳ  ಕೊಟ್ಟು ನೇಮಿಸಿರುವುದು ಏಕೆ? ಗುತ್ತಿಗೆದಾರರು ಇರುವುದು ಏಕೆ?  ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಿ ಪ್ರತಿನಿಧಿಗಳನ್ನು ಆರಿಸುವ ಬದಲು ಬಿಬಿಎಂಪಿ­ಯನ್ನು ಯಾವುದಾದರೂ ಖಾಸಗಿ ಸಂಸ್ಥೆಗೆ ಗುತ್ತಿಗೆಗೆ ಕೊಡುವುದು ಉಚಿತವಲ್ಲವೇ?

–ಕೆ.ಎನ್‌. ಭಗವಾನ್‌, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry