ಮಂಗಳವಾರ, ಅಕ್ಟೋಬರ್ 15, 2019
26 °C

ಬಿಬಿಎಂಪಿ: ಅನಧಿಕೃತ ಫಲಕಗಳ ತೆರವು

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ ಅನಧಿಕೃತ ಫ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಬಿಬಿಎಂಪಿಯು ವಿಶೇಷ ಕಾರ್ಯಾಚರಣೆ ಮೂಲಕ ತೆರವುಗೊಳಿದೆ.ಪ್ಲೆಕ್ಸ್ ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದರಿಂದ ಪಾಲಿಕೆ ಆಯುಕ್ತರು ಆಯಾ ವಲಯಗಳ ಹೆಚ್ಚುವರಿ ಮತ್ತು  ಜಂಟಿ ಆಯುಕ್ತರುಗಳಿಗೆ ಅನಧಿಕೃತ ಪ್ರಚಾರ ಫಲಕಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರು.ಪೂರ್ವ ವಲಯದಲ್ಲಿ 30 ಫ್ಲೆಕ್ಸ್, 18 ಬ್ಯಾನರ್‌ಗಳು, ಪಶ್ಚಿಮ ವಲಯದಲ್ಲಿ  26 ಕಟೌಟ್‌ಗಳು, 40 ಫ್ಲೆಕ್ಸ್‌ಗಳು ಮತ್ತು 35 ಬ್ಯಾನರ್‌ಗಳು, ದಕ್ಷಿಣ ವಲಯದಲ್ಲಿ 73 ಫ್ಲೆಕ್ಸ್, 12 ಕಟೌಟ್‌ಗಳು, 200 ಮೀಟರ್ ಉದ್ದದ ಬಂಟಿಂಗ್ಸ್‌ಗಳು, ರಾಜರಾಜೇಶ್ವರಿನಗರ ವಲಯದಲ್ಲಿ 25 ಫ್ಲೆಕ್ಸ್ ಬೋರ್ಡ್‌ಗಳು ಹಾಗೂ 150 ಮೀಟರ್ ಉದ್ದದ ಬಂಟಿಂಗ್ಸ್‌ಗಳು, ಯಲಹಂಕ ವಲಯದಲ್ಲಿ 50 ಬ್ಯಾನರ್ಸ್‌ ಹಾಗೂ 150 ಮೀಟರ್ ಉದ್ದದ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ.ದಾಸರಹಳ್ಳಿ ವಲಯದಲ್ಲಿ 20 ಕಟೌಟ್‌ಗಳು, 200 ಮೀಟರ್ ಉದ್ದದ ಬಂಟಿಂಗ್ಸ್ ಹಾಗೂ 9 ಬ್ಯಾನರ್‌ಗಳು, ಬೊಮ್ಮನಹಳ್ಳಿ ವಲಯದಲ್ಲಿ 35 ಫ್ಲೆಕ್ಸ್ ಬೋರ್ಡ್‌ಗಳು, ಮಹದೇವಪುರ ವಲಯದಲ್ಲಿ 400ಕ್ಕೂ ಹೆಚ್ಚು ಫ್ಲೆಕ್ಸ್,  ಬ್ಯಾನರ್ಸ್‌ ಮತ್ತು ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವ ಕಾರ್ಯಚರಣೆಯನ್ನು ಮುಂದುವರೆಸಲಾಗುವುದು ಎಂದಿರುವ ಆಯುಕ್ತರು,  ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ಹಾಕದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Post Comments (+)