ಮಂಗಳವಾರ, ನವೆಂಬರ್ 19, 2019
29 °C

ಬಿಬಿಎಂಪಿ ಆಯುಕ್ತರ ಆದೇಶ ರೂ 523 ಕೋಟಿ ಕಾಮಗಾರಿ ಸ್ಥಗಿತ

Published:
Updated:

ಬೆಂಗಳೂರು: ವಿವಿಧ ಕಾಮಗಾರಿ ಗಳಿಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ವಿಶೇಷ ಅನುದಾನ ದಲ್ಲಿ ಅವ್ಯವಹಾರ ನಡೆದಿರುವುದನ್ನು ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು,ರೂ 523 ಕೋಟಿ  ವೆಚ್ಚದ ವಿವಿಧ  ಕಾಮಗಾರಿಗಳ ಸ್ಥಗಿತಕ್ಕೆ ಆದೇಶ ನೀಡಿದ್ದಾರೆ.ಕಾಮಗಾರಿ ಅವ್ಯವಹಾರದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸಂಖ್ಯೆಗಳನ್ನು ರದ್ದುಪಡಿಸ ಲಾಗಿದೆ. ಎಲ್ಲ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಆರೋಪಗಳ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ವಿಧಾನಸಭಾ ಚುನಾ ವಣೆಯ ನಂತರ ಎಲ್ಲ ಕಾಮಗಾರಿ ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.ಚುನಾವಣೆ ನಿಗದಿಯಾಗುವ ಮೂರು ತಿಂಗಳು ಮೊದಲು ವಿಶೇಷ ಅನುದಾನದಡಿ ಹಣವನ್ನು ಬಿಡುಗಡೆ ಮಾಡಲಾಗಿತ್ತು.ಮಾರ್ಚ್ 31ರ ಒಳಗೆ ರೂ 762,51 ಕೋಟಿ ವೆಚ್ಚದಲ್ಲಿ 2,756 ಕಾಮಗಾರಿಗಳನ್ನು ನಿರ್ವಹಿಸಬೇಕಿತ್ತು. ಆದರೆ ರೂ 2,39,57 ಕೋಟಿ  ವೆಚ್ಚದಲ್ಲಿ 786 ಕಾಮಗಾರಿಗಳಿಗೆ ಚಾಲನೆ ದೊರೆತಿದೆ. 523 ಕೋಟಿ ರೂಪಾಯಿಯ ಕಾಮಗಾರಿಗಳು ಆರಂಭಗೊಳ್ಳದೇ ಹಲವು ಅನು ಮಾನಕ್ಕೆ ಎಡೆಮಾಡಿಕೊಟ್ಟಿದೆ.

ಪ್ರತಿಕ್ರಿಯಿಸಿ (+)