ಶುಕ್ರವಾರ, ನವೆಂಬರ್ 22, 2019
23 °C

ಬಿಬಿಎಂಪಿ ಉಪಚುನಾವಣೆ: ಬಿಜೆಪಿಗೆ ಜಯ

Published:
Updated:

ಕೃಷ್ಣರಾಜಪುರ: ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆಯ ಎ.ನಾರಾಯಣಪುರ ವಾರ್ಡ್‌ಗೆ (ಸಂಖ್ಯೆ 56) ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ವಿಜಯಾ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ವಿಜಯಾ ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಎ.ಗೋಪಾಲ ಅವರನ್ನು 393 ಮತಗಳ ಅಂತರದಿಂದ ಸೋಲಿಸಿದ್ದಾರೆ.ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ನಡೆದ ಈ ಉಪ ಚುನಾವಣೆ ಕುತೂಹಲ ಕೆರಳಿಸಿತ್ತು.ಹಿಂದುಳಿದ `ಎ' ವರ್ಗಕ್ಕೆ ಮೀಸಲಾಗಿದ್ದ ಈ ವಾರ್ಡ್‌ಗೆ ಹಿಂದೆ ಬಿಜೆಪಿಯ ಎಸ್.ಎಸ್.ಪ್ರಸಾದ್ ಆಯ್ಕೆಯಾಗಿದ್ದರು. ಪ್ರಸಾದ್ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು, ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು.ಉಪ ಚುನಾವಣೆಯಲ್ಲಿ ಎಸ್.ಎಸ್.ಪ್ರಸಾದ್ ಅವರು ತಮ್ಮ ಪತ್ನಿ ವಿಜಯಾ ಅವರನ್ನು ಕಣಕ್ಕಿಳಿಸಿದ್ದರು.

ಪ್ರತಿಕ್ರಿಯಿಸಿ (+)