ಬುಧವಾರ, ಮೇ 18, 2022
25 °C

ಬಿಬಿಎಂಪಿ ಸದಸ್ಯರ ಕೊಡಗು ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪ ಮೇಯರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಸುಮಾರು 60 ಜನರಿದ್ದ ಬಿಬಿಎಂಪಿ ಸದಸ್ಯರ ತಂಡ ಕೊಡಗು ಪ್ರವಾಸ ಕೈಗೊಂಡಿತ್ತು. ಪಕ್ಷಾತೀತವಾಗಿ ಎಲ್ಲ ಸದಸ್ಯರು ಕೈಗೊಂಡಿದ್ದ ಯಾತ್ರೆಯನ್ನು ಬಿಬಿಎಂಪಿ ಸದಸ್ಯ ಸಿ.ಆರ್. ಜಯಪ್ಪ ರೆಡ್ಡಿ ಆಯೋಜಿಸಿದ್ದರು.ಎರಡು ಬಸ್‌ಗಳಲ್ಲಿ ಮಂಗಳವಾರವೇ ಮಡಿಕೇರಿಗೆ ತೆರಳಿದ್ದ ಈ ತಂಡ ಪರಂಪರೆ ರೆಸಾರ್ಟ್‌ನಲ್ಲಿ ಇಳಿದುಕೊಂಡಿತ್ತು. ಕೊಡಗಿನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು, ಹಾರಂಗಿ ಜಲಾಶಯವನ್ನೂ ವೀಕ್ಷಿಸಿದರು.`ಮುಂಬರುವ ಒಕ್ಕಲಿಗ ಸಂಘದ ಚುನಾವಣೆ ಮತ್ತು ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲು ಈ ಯಾತ್ರೆ ಕೈಗೊಂಡಿದ್ದೆವು' ಎಂದು ಶ್ರೀನಿವಾಸ್ ಮತ್ತು ಜಯಪ್ಪ ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.`ಆಯಾ ಸಮುದಾಯದ ಮುಖಂಡರು ಹೀಗೆ ಯಾತ್ರೆ ಸಂಘಟಿಸುವುದು ಇದೇ ಮೊದಲೇನಲ್ಲ. ನಿತ್ಯದ ಜಂಜಾಟದಿಂದ ಹಗುರಾಗಲು ಇಂತಹ ಪ್ರವಾಸ ಕೈಗೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ನಾವು ಒಂದು ದಿನ ನಗರದಲ್ಲಿ ಇಲ್ಲದ ಮಾತ್ರಕ್ಕೆ ಅಲ್ಲೋಲ-ಕಲ್ಲೋಲ ಏನೂ ಆಗುವುದಿಲ್ಲ. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಯೇ ನಾವು ಯಾತ್ರೆ ಕೈಗೊಂಡಿದ್ದೇವೆ' ಎಂದು ಜಯಪ್ಪ ರೆಡ್ಡಿ ಹೇಳಿದರು.

`ಇಷ್ಟಕ್ಕೂ ನಾವು ಸಾರ್ವಜನಿಕರ ಹಣ ಬಳಕೆ ಮಾಡಿಕೊಂಡು ಈ ಪ್ರವಾಸ ಸಂಘಟಿಸಿಲ್ಲ. ನಮ್ಮ ಸ್ವಂತ ಖರ್ಚಿನಿಂದ ಹೋಗಿದ್ದೇವೆ. ಇತರ ಸಮುದಾಯದ ಕೆಲವು ಸದಸ್ಯರೂ ಜತೆಯಲ್ಲಿದ್ದರು. ಮೈಸೂರಿನ ಸಂಸದ ಎಚ್.ವಿಶ್ವನಾಥ್ ಸಹ ಬಂದು ನಮ್ಮಂದಿಗೆ ಕಾಲ ಕಳೆದರು' ಎಂದು ತಿಳಿಸಿದರು.ಮಡಿಕೇರಿಗೆ ತೆರಳಿದ್ದ ಬಿಬಿಎಂಪಿ ಸದಸ್ಯರ ತಂಡ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.