ಬಿಬಿಸಿ ಹಿಂದಿ ಸೇವೆ ಮುಂದುವರಿಯಲಿ

7

ಬಿಬಿಸಿ ಹಿಂದಿ ಸೇವೆ ಮುಂದುವರಿಯಲಿ

Published:
Updated:

ಏಳು ದಶಕಗಳಿಂದ ಇರುವ ಬಿಬಿಸಿ ಹಿಂದಿ ರೇಡಿಯೋ ಸೇವೆಯನ್ನು ಸ್ಥಗಿತಗೊಳಿಸುವ ಸುದ್ದಿ ನಿಜಕ್ಕೂ ಆಘಾತಕಾರಿ.

ಆಜ್‌ಕಲ್, ವಿಶ್ವಭಾರತಿ ಮುಂತಾದ ಕಾರ್ಯಕ್ರಮಗಳು ಭಾರತೀಯ ಹಾಗೂ ವಿಶ್ವದ ಸುದ್ದಿಗಳನ್ನು ನಮಗೆಲ್ಲ ತಲುಪಿಸುತ್ತಿರುವ ಬಿಬಿಸಿ, ಭಾರತೀಯರಿಗಾಗಿ ಅನುಪಮ ಸೇವೆ ಸಲ್ಲಿಸುತ್ತಿದೆ.ದೂರದರ್ಶನದ ಭರಾಟೆಯ ನಡುವೆಯೂ ಬಿಬಿಸಿ ಹಿಂದಿ ಸೇವೆ ತನ್ನದೇ ಆದ ಶ್ರೋತೃಗಳನ್ನು ಹೊಂದಿರುವುದು ಶ್ಲಾಘನೀಯ. ನಿಷ್ಪಕ್ಷಪಾತ , ನಿರ್ಭೀತ ಮತ್ತು ಶೀಘ್ರ ಸುದ್ದಿ ಬಿತ್ತರಣೆಗೆ ಹೆಸರಾದ ಬಿಬಿಸಿ ಹಿಂದಿ ಸುದ್ದಿಸೇವೆಯನ್ನು ಮುಂದುವರೆಸಲು ಭಾರತೀಯರೆಲ್ಲರ ಪರವಾಗಿ ಬಿಬಿಸಿ ಲಂಡನ್ ಪ್ರಾಧಿಕಾರಕ್ಕೆ ವಿನಮ್ರ ಮನವಿ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry