ಬಿಯರ್‌ಗೂ ದಿನಾಚರಣೆ!

7

ಬಿಯರ್‌ಗೂ ದಿನಾಚರಣೆ!

Published:
Updated:
ಬಿಯರ್‌ಗೂ ದಿನಾಚರಣೆ!

ಆಗಸ್ಟ್ ಎಂದರೆ ಹಬ್ಬಗಳ ಮಾಸ. ಸ್ನೇಹಿತರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಎಲ್ಲರಿಗೂ ಗೊತ್ತೇ ಇದೆ. `ಅಂತರರಾಷ್ಟ್ರೀಯ ಬಿಯರ್ ದಿನಾಚರಣೆ' ಕೂಡ ಇದೇ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಿಯರ್ ಹಬ್ಬಕ್ಕೆ ಕಿಂಗ್‌ಫಿಷರ್ ಸಕಲ ಸಿದ್ಧತೆ ನಡೆಸಿದ್ದು, ಅದರ ಹೊಣೆಯನ್ನು ತನ್ನ ಗ್ರಾಹಕರಿಗೇ ನೀಡಿರುವುದು ವಿಶೇಷ.ಉತ್ಸಾಹಿ ಹಾಗೂ ಸಾಮಾಜಿಕ ತಾಣಗಳನ್ನು ಹೆಚ್ಚಾಗಿ ಬಳಸುವ ಕಿಂಗ್‌ಫಿಷರ್ ಅಭಿಮಾನಿಗಳು ನಗರದ ಮಂದಿಗೆ ತಮ್ಮ ಸಂದೇಶಗಳ ಮೂಲಕ ಬಿಯರ್ ಹಬ್ಬಕ್ಕೆ ಕರೆ ನೀಡುವ ಮೂಲಕ ಬಿಯರ್ ಗೆಲ್ಲುವ ಸದವಕಾಶವನ್ನು ಅದು ನೀಡಿದೆ.`ನಮಗೇಕೆ ಬಿಯರ್ ಬೇಕು?' ಎಂಬ ಸರಳ ಪ್ರಶ್ನೆಗೆ ಗ್ರಾಹಕರು ಉತ್ತರ ಕಳುಹಿಸಬೇಕು. ಅವರು ಉತ್ತರ ಕಳುಹಿಸುವುದು ಬಿಯರ್ ದೇವರಿಗೆ ಎಂಬುದು ವಿಶೇಷ. ೞಈಛಿಚ್ಟಆಛಿಛ್ಟಿಎಟ ಎಂದು ಸಂಬೋಧಿಸಿ ತಮ್ಮ ಸಂದೇಶಗಳನ್ನು ಟ್ವಿಟ್ಟರ್ ಮೂಲಕ ಕಳುಹಿಸಬೇಕು. ಹೀಗೆ ಕಳುಹಿಸಿದ ಪ್ರತಿಯೊಂದು ಸಂದೇಶವೂ ಒಂದೊಂದು ಎಂಎಲ್ ಬಿಯರ್ ಅನ್ನು ಕಳುಹಿಸುವವರ ಖಾತೆಗೆ ವರ್ಗಾಯಿಸುತ್ತದೆ. ಟ್ವೀಟ್‌ಗಳು ಎಷ್ಟು ಹೆಚ್ಚಾಗುತ್ತವೆಯೋ ಅಷ್ಟೂ ಅಧಿಕ ಬಿಯರ್ ಸಿಗುತ್ತದೆ ಎಂದರ್ಥ.ಹೀಗಾಗಿ ಅಧಿಕ ಟ್ವೀಟ್ ಮಾಡಿದ ಗ್ರಾಹಕರಿಗೆ ಅದಕ್ಕೆ ಸರಿಸಮನಾದ ಅಳತೆಯ ಬಿಯರ್ ಹೀರುವ ಅವಕಾಶ ಸಿಗಲಿದೆ. ಈ ಸ್ಪರ್ಧೆ ಈಗಾಗಲೇ ಆರಂಭವಾಗಿದ್ದು, ಆಗಸ್ಟ್ 1ರಂದು ಕೊನೆಗೊಳ್ಳಲಿದೆ. ಇದರ ವಿಜೇತರ ಹೆಸರುಗಳನ್ನು ಆ.2ರಂದು ಘೊಷಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry