ಬಿಯರ್ ಹಬ್ಬ

7

ಬಿಯರ್ ಹಬ್ಬ

Published:
Updated:

`ಪಬ್ ಸಿಟಿ~ ಎಂದು ಗುರ್ತಿಸಿಕೊಂಡಿರುವ ಬೆಂಗಳೂರು ನಗರಿ ಅಕ್ಟೋಬರ್‌ನಲ್ಲಿ ಮತ್ತಷ್ಟು ಕಳೆಗಟ್ಟುತ್ತದೆ. ಅದಕ್ಕೆ ಕಾರಣ ಕೂಡ ಇದೆ. ದೇಶದ ಅತ್ಯಂತ ದೊಡ್ಡ `ಬಿಯರ್ ಫೆಸ್ಟಿವಲ್~ ಎಂದು ಖ್ಯಾತಿ ಪಡೆದಿರುವ `ಅಕ್ಟೋಬರ್‌ಫೆಸ್ಟ್~ ಈಗ ಮತ್ತೊಮ್ಮೆ ಬಂದಿದೆ.ಅಂದಹಾಗೆ, `ದಿ ಗ್ರೇಟ್ ಇಂಡಿಯನ್ ಅಕ್ಟೋಬರ್ ಫೆಸ್ಟ್~ನ ಸಾರಥ್ಯ ವಹಿಸಿರುವುದು ಕಿಂಗ್‌ಫಿಷರ್ ಪ್ರೀಮಿಯಂ. ಕಿಂಗ್‌ಫಿಷರ್ ಬಿಯರ್ ಹೀರುತ್ತಾ, ದಿಗ್ಗಜರ ಸಂಗೀತ ಕೇಳುತ್ತಾ, ಇಷ್ಟದ ಊಟ ಸವಿಯುತ್ತಾ ಅನಿಯಮಿತ ಮನರಂಜನೆ ತಮ್ಮದಾಗಿಸಿಕೊಳ್ಳುವ ಸರದಿ ಈಗ ಪ್ರೇಕ್ಷಕರದ್ದು.ಈ ಬಾರಿಯ ಅಕ್ಟೋಬರ್‌ಫೆಸ್ಟ್‌ನ ಪ್ರಧಾನ ಆಕರ್ಷಣೆ ಬಾಲಿವುಡ್‌ನ ಖ್ಯಾತ ಗಾಯಕಿ ಸುನಿಧಿ ಚೌಹಾಣ್. ಇವರ ಜತೆಗೆ ದೇಸಿ ಹಾಗೂ ವಿದೇಶಿ ಬ್ಯಾಂಡ್‌ಗಳು ಇಲ್ಲಿ ಅಬ್ಬರಿಸಲಿವೆ.ರಘು ದೀಕ್ಷಿತ್, ಶಂಕರ್ ಟಕ್ಕರ್, ಅಗಂ, ಶಾಹಿರ್ ಅಂಡ್ ಫಂಕ್, ಗೋನೆ ಇನ್ ಏಪ್ರಿಲ್ ತಂಡದವರು ಅಬ್ಬರದ ಬ್ಯಾಂಡ್ ಭಜಾಯಿಸಿ ಪ್ರೇಕ್ಷಕರ ನಾಡಿಮಿಡಿತ ಪರೀಕ್ಷಿಸಲು ಸಜ್ಜಾಗಿದ್ದಾರೆ.ಜಯಮಹಲ್ ರಸ್ತೆಯಲ್ಲಿರುವ ಜಯಮಹಲ್ ಪ್ಯಾಲೇಸ್‌ನಲ್ಲಿ ಇಂದಿನಿಂದ ಭಾನುವಾರದವರೆಗೆ ನಡೆಯಲಿರುವ ಅಕ್ಟೋಬರ್‌ಫೆಸ್ಟ್‌ನಲ್ಲಿ ಅಬ್ಬರದ ಸಂಗೀತದ ಜತೆಗೆ ಬಿಯರ್ ಹೀರುತ್ತಾ `ಅಕ್ಟೋಬರ್ ಫೆಸ್ಟ್~ಗೆ ರಂಗು ತುಂಬಬಹುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry